ವೀಡಿಯೋ ವರದಿಗಳು

ಸಹೋದರನನ್ನು ರಕ್ಷಿಸಿ ಸೂಪರ್ ಹೀರೋ ಆದ ಎರಡು ವರ್ಷದ ಪೋರ ! ಈ ವೀಡಿಯೊ ನೋಡಿ…

Pinterest LinkedIn Tumblr

ಎರಡು ವರ್ಷದ ಕಂದಮ್ಮ, ತನ್ನ ವಯಸ್ಸಿಗೂ ಮೀರಿದ ಮಾನವೀಯತೆ ಕೆಲಸ ಮಾಡಿ ಸೂಪರ್ ಹೀರೋ ಆಗಿದ್ದಾನೆ. ಅಪಾಯದಲ್ಲಿ ಸಿಲುಕಿದ್ದ ತನ್ನ ಸಹೋದರನನ್ನು ರಕ್ಷಿಸಿ ಸೂಪರ್ ಹೀರೋ ಆಗಿದ್ದಾನೆ.

ಈ ಮಕ್ಕಳಿಬ್ಬರು ಅವಳಿ ಮಕ್ಕಳಾಗಿದ್ದು, ಮನೆಯ ಬೆಡ್ ರೂಮ್’ನಲ್ಲಿ ಆಟವಾಡುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ವಾರ್ಡ್ ರೋಬ್ ಅವಳಿ ಮಕ್ಕಳ ಮೇಲೆ ಬಿದ್ದಿದೆ. ಆ ವೇಳೆ ಓರ್ವ ಕಂದಮ್ಮ ವಾರ್ಡ್ ರೋಬ್ ಕೆಳಗೆ ಸಿಲುಕಿಕೊಂಡು ಒದ್ದಾಡುತ್ತಿರುತ್ತಾನೆ. ಸಹೋದರ ಒದ್ದಾಡುತ್ತಿರುವುದನ್ನು ನೋಡಿದ ಕಂದಮ್ಮ, ಆತನನ್ನು ರಕ್ಷಿಸಲು ಹರಸಾಹಸ ಪಡುತ್ತಾನೆ. ಕೊನೆಗೆ ವಾರ್ಡ್ ರೋಬ್’ನ್ನು ಮೇಲೆತ್ತಿ ರಕ್ಷಿಸುತ್ತಾನೆ.

ಎರಡು ವರ್ಷದ ಪುಟ್ಟ ಕಂದಮ್ಮನ ಈ ಸಾಹಸ ಕಾರ್ಯ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Comments are closed.