ವೀಡಿಯೋ ವರದಿಗಳು

ಕಾರು ಇನ್ನೇನು ಢಿಕ್ಕಿ ಹೊಡೆಯಿತು ಎನ್ನುವಷ್ಟರಲ್ಲಿ ತನ್ನಿಬ್ಬರು ಮಕ್ಕಳನ್ನು ರಕ್ಷಿಸಿದ ವ್ಯಕ್ತಿ ! ವೈರಲ್ ಆಯಿತು ವೀಡಿಯೊ

Pinterest LinkedIn Tumblr

ಚಾಲಕರ ಹೊಣೆಗೇಡಿತನ ಹಾಗೂ ಅತೀ ವೇಗದ ಚಾಲನೆಯಿಂದಾಗಿ ಪುಟ್ಟ ಮಕ್ಕಳು ಪ್ರಾಣ ಕಳೆದುಕೊಂಡ ಅನೇಕ ಪ್ರಕರಣಗಳಿವೆ. ಆದ್ರೆ ವ್ಯಕ್ತಿಯೊಬ್ಬರು ವೇಗವಾಗಿ ಬಂದ ಕಾರ್‍ನಿಂದ ತನ್ನಿಬ್ಬರು ಮಕ್ಕಳನ್ನು ಸಿನಿಮೀಯ ರೀತಿಯಲ್ಲಿ ಪಾರು ಮಾಡಿದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.

ಬೈಕ್ ಮೆಕ್ಯಾನಿಕ್‍ವೊಬ್ಬರು ಕೆಲಸ ಮಾಡುತ್ತಿರುವಾಗ ಅವರ ಮಕ್ಕಳು ಅಲ್ಲೇ ನಡೆದುಕೊಂಡು ಹೋಗುತ್ತಿದ್ದು, ಕಾರ್‍ವೊಂದು ವೇಗವಾಗಿ ಬರುತ್ತಿದ್ದುದನ್ನು ನೋಡಿದ್ದಾರೆ. ಕೂಡಲೇ ಮಕ್ಕಳನ್ನ ಕೈಲ್ಲಿ ಬಾಚಿಕೊಂಡು ನೆಲದ ಮೇಲೆ ಬಿದ್ದು ಹಿಂದಕ್ಕೆ ಪಲ್ಟಿ ಹೊಡೆದಿದ್ದಾರೆ. ಇದರಿಂದ ಇಬ್ಬರು ಮಕ್ಕಳ ಪ್ರಾಣ ಉಳಿದಿದೆ. ಈ ವೇಳೆ ಸ್ವಲ್ಪ ಹೆಚ್ಚುಕಡಿಮೆಯಾಗಿದ್ರೂ ಮೂವರ ಪ್ರಾಣಕ್ಕೂ ಅಪಾಯವಾಗುವ ಸಂಭವವಿತ್ತು.

Comments are closed.