ವೀಡಿಯೋ ವರದಿಗಳು

ಪ್ರತಿಭಟನಕಾರರ ಮೇಲೆ ಪೊಲೀಸ್ ವ್ಯಾನ್ ಹರಿಸಿದ ಪೊಲೀಸರು ! ಈ ವೀಡಿಯೊ ಒಮ್ಮೆ ನೋಡಿ…

Pinterest LinkedIn Tumblr

https://youtu.be/VN8xjrF8FBk

ಮನಿಲ: ಅಮೆರಿಕ ನೀತಿಗಳ ವಿರೋಧಿಸಿ ಫಿಲಿಫೈನ್ಸ್‌ನ ರಾಜಧಾನಿ ಮಲಿನದಲ್ಲಿರುವ ಅಮೆರಿಕದ ರಾಯಭಾರಿ ಕಚೇರಿ ಎದುರು ನಡೆಸಲಾಗುತ್ತಿದ್ದ ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದು ಪ್ರತಿಭಟನಾನಿರತರನ್ನು ಚದುರಿಸಲು ಪೊಲೀಸರು ಪ್ರತಿಭಟನಕಾರರ ಮೇಲೆ ಪೊಲೀಸ್ ವ್ಯಾನ್ ಹರಿಸಿದ್ದಾರೆ.

ಮನಿಲಾದಲ್ಲಿ ಅಮೆರಿಕ ರಾಯಭಾರಿ ಕಚೇರಿ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾಗ ಫಿಲಿಫೈನ್ಸ್‌ ಪೊಲೀಸರಿದ್ದ ವ್ಯಾನ್‌ ವಿದ್ಯಾರ್ಥಿಗಳ ಮೇಲೆ ಅಡ್ಡಾದಿಡ್ಡಿ ಹರಿದ ಪರಿಣಾಮ ಮೂವರು ಮೃತಪಟ್ಟು ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ. ವಿದ್ಯಾರ್ಥಿಗಳ ಮೇಲೆ ವ್ಯಾನ್‌ ಹರಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಅಮೆರಿಕದ ವಿದೇಶಾಂಗ ನೀತಿಗಳು ನಮಗೆ ಬೇಡ ಎಂದು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಿದ್ದರು ಈ ವೇಳೆ ಪ್ರತಿಭಟನೆಯನ್ನು ಹತ್ತಿಕ್ಕಲು ಬಂದ ಪೊಲೀಸರು ಪ್ರತಿಭಟನಾ ನಿರತರ ಮೇಲೆ ಪೊಲೀಸ್ ವ್ಯಾನ್ ಹರಿಸಿದ್ದಾರೆ. ಈ ಘಟನೆಯಲ್ಲಿ ಮೂವರು ಮೃತಪಟ್ಟು 50ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, 25ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.

ಪ್ರತಿಭಟನಾ ನಿರತರನ್ನು ನಾಯಿಗಳಂತೆ ಕಂಡ ಫಿಲಿಫೈನ್ಸ್‌ ಪೊಲೀಸರು ಅವರ ಮೇಲೆ ಮನಬಂದಂತೆ ವ್ಯಾನ್ ಹರಿಸಿದ್ದಾರೆ. ಈ ವೇಳೆ ವ್ಯಾನ್ ಕೆಳಗೆ ಸಿಲುಕಿ ಹಲವು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಟಿಯರ್ ಗ್ಯಾಸ್ ಪ್ರಯೋಗಿಸಿದ್ದಾರೆ. ಇದರಿಂದ ಕೆರಳಿದ ಪ್ರತಿಭಟನಾಕಾರರು ಪೊಲೀಸ್ ವ್ಯಾನ್ ಗಳ ಮೇಲೆ ದೊಣ್ಣೆ ಕೋಲುಗಳಿಂದ ಬಡಿದಿದ್ದಾರೆ. ಅಲ್ಲದೆ ಕಲ್ಲುಗಳನ್ನು ತೂರಿದ್ದಾರೆ. ಯಾವುದಕ್ಕೂ ಬಗ್ಗದ ಪ್ರತಿಭಟನಾಕಾರರ ಮೇಲೆ ಕೊನೆಗೆ ಪೊಲೀಸರು ವ್ಯಾನ್ ಗಳನ್ನು ಹರಿಸಿದ್ದಾರೆ.

Comments are closed.