ವೀಡಿಯೋ ವರದಿಗಳು

ನೀರಿನಲ್ಲಿ ಮುಳುಗುತ್ತಿದ್ದ ಗೆಳೆಯನ ರಕ್ಷಣೆಗಾಗಿ ಧಾವಿಸಿದ ಮರಿಯಾನೆ! ಈ ಹೃದಯಸ್ಪರ್ಶಿ ವೀಡಿಯೊ ಒಮ್ಮೆ ನೋಡಿ

Pinterest LinkedIn Tumblr

ಉತ್ತರ ಥಾಯ್ಲೆಂಡ್‌ನ ಎಲಿಫ್ಯಾಂಟ್ ನೇಚರ್ ಪಾರ್ಕ್‌ನಲ್ಲಿ, ತನ್ನ ತರಬೇತುದಾರ ನೀರಿನಲ್ಲಿ ಮುಳುಗುತ್ತಿದ್ದಾನೆ ಎಂಬುದಾಗಿ ಭಾವಿಸಿದ ಮರಿಯಾನೆಯೊಂದು ಆತನನ್ನು ರಕ್ಷಿಸಲು ಇನ್ನಿಲ್ಲದಂತೆ ನೀರಿನೊಳಕ್ಕೆ ಧಾವಿಸಿ ಬಂದ ಹೃದಯಸ್ಪರ್ಶಿ ಸನ್ನಿವೇಶವೊಂದು ಕ್ಯಾಮರಾದಲ್ಲಿ ದಾಖಲಾಗಿದ್ದು, ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ವಾಸ್ತವವಾಗಿ ಮಾವುತ ಡ್ಯಾರಿಕ್ ಕೊಳದಲ್ಲಿ ಈಜುತ್ತಿದ್ದರು. ಒಂದು ಹಂತದಲ್ಲಿ, ತನ್ನ ಮಾವುತ ಆಪತ್ತಿನಲ್ಲಿದ್ದಾನೆ ಎಂಬುದಾಗಿ ಭಾವಿಸಿದ ಮರಿಯಾನೆ ‘ಖಾಮ್ ಲಹಾ’ ತಕ್ಷಣ ತನ್ನ ಮಾನವ ಸ್ನೇಹಿತನ ರಕ್ಷಣೆಗೆ ಧಾವಿಸಿದೆ.

Comments are closed.