ಅಂತರಾಷ್ಟ್ರೀಯ

ಸಿಂಗಾಪುರದಲ್ಲಿ ರೈಲಿನಲ್ಲಿ ‘ದೀಪಾವಳಿ’ ! ಎಲ್ಲರ ಗಮನ ಸೆಳೆಯುತ್ತಿರುವ ಶುಭ ಸಂದೇಶಗಳು, ಚಿತ್ರಗಳು, ವಿನ್ಯಾಸಗಳು – ಅಲಂಕಾರಗಳು

Pinterest LinkedIn Tumblr

1

ಸಿಂಗಾಪುರದಲ್ಲಿ ಹಿಂದೂಗಳ ದೀಪಾವಳಿ ಹಬ್ಬವನ್ನು ಎಲ್ಲರಿಗೂ ಪರಿಚಯಿಸುವ ಜೊತೆಗೆ ಸೌಹಾರ್ದತೆ, ಒಗ್ಗಟ್ಟಿನ ಮಂತ್ರ ಪಠಿಸುದಕ್ಕಾಗಿ ರೈಲಿನೊಳಗೆ ದೀಪಾವಳಿಯ ಶುಭ ಕೋರುವ ಬರಹ, ಚಿತ್ರಗಳು, ದೀಪಾಲಂಕಾರಗಳು ರಾರಾಜಿಸುತ್ತಿವೆ.

2

3

4

5

6

7

ಭಾರತೀಯ ಮೂಲದವರು ಹೆಚ್ಚಾಗಿರುವ ಸಿಂಗಾಪುರವು ಸಣ್ಣದೊಂದು ಭಾರತವೇ ಆಗಿದೆ. ಇಲ್ಲಿ ದೀಪಾವಳಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತೆ.

ಸಿಂಗಾಪುರ್ ಲ್ಯಾಂಡ್ ಟ್ರಾನ್ಸ್ಪೋರ್ಟ್ ಅಥಾರಿಟಿ ಲೋಕಲ್ ರೈಲಿನಲ್ಲಿ ದೀಪಾವಳಿ ಹಬ್ಬದ ಪರಿಕಲ್ಪನೆಯನ್ನು ಎಲ್ಲರಿಗೂ ಪರಿಚಯಿಸಲು ಮುಂದಾಗಿದೆ. ಇದೇ ಹಿನ್ನೆಲೆಯಲ್ಲಿ ಮನೆಯಲ್ಲಿ ದೀಪಾವಳಿ ಹಬ್ಬ ಆಚರಿಸುವಂತೆ ರೈಲಿನೊಳಗೆ ಶೃಂಗರಿಸಲಾಗಿದೆ. ರೈಲು ಹಾಗು ರೈಲು ನಿಲ್ದಾಣದ ಕಟೌಟ್, ಬ್ಯಾನರ್, ಡಿಸ್ಪ್ಲೇಗಳಲ್ಲಿ Haapy Deepavali ಎಂಬ ಶುಭ ಸಂದೇಶಗಳು, ಚಿತ್ರಗಳು, ವಿನ್ಯಾಸಗಳು ಮತ್ತು ಅಲಂಕಾರಗಳು ಜನರ ಗಮನ ಸೆಳೆಯುತ್ತಿದೆ.

Comments are closed.