ರಾಷ್ಟ್ರೀಯ

ಸ್ವಚ್ಛ ಭಾರತದ ಕಲ್ಪನೆಗಾಗಿ ಮಾಂಗಲ್ಯಸೂತ್ರ ಮಾರಿ ಮನೆಯಲ್ಲಿ ಶೌಚಾಲಯ ಕಟ್ಟಿಸಿದ ಮಹಾತಾಯಿ.

Pinterest LinkedIn Tumblr

ಕಾನಪುರ್ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸ್ವಚ್ಛ ಭಾರತದ ಕಲ್ಪನೆ ಈಗಾಗಲೇ ಮನೆಮಾತಾಗಿದೆ. ಆದರೂ ಇದು ಬಹುತೇಕ ಕಡೆ ಸಾಕಾರವಾಗಿಲ್ಲ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಗೃಹಿಣಿಯೊಬ್ಬರು ತಮ್ಮ ಮಾಂಗಲ್ಯಸೂತ್ರವನ್ನೇ ಮಾರಾಟ ಮಾಡಿ ಶೌಚಾಲಯ ಕಟ್ಟಿಸುವ ಮೂಲಕ ಮಾದರಿಯಾಗಿದ್ದಾರೆ. ಕಾನ್ಪುರ ನಿವಾಸಿ ಲತಾದೇವಿ ದಿವಾಕರ್ ತಮ್ಮ ತಾಳಿ ಮಾರಿ ಶೌಚಾಲಯ ಕಟ್ಟಿಸಿದ್ದಾರೆ.

ತಮ್ಮ ಮನೆಯಲ್ಲಿ ಶೌಚಾಲಯವಿಲ್ಲದ ಕಾರಣ ಕುಟುಂಬಸ್ಥರು ಬಹಿರ್ದೆಸೆಗೆ ಹೋಗಲು ಮುಜುಗರ ಪಡುತ್ತಿದ್ದರು. ಶೌಚಕ್ಕಾಗಿ ಹೊರಹೋಗುವುದರಿಂದ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದರು.ಆಭರಣಕ್ಕಿಂತ ಮೂಲಭೂತ ಅವಶ್ಯಕತೆಯಾದ ಶೌಚಾಲಯ ಮುಖ್ಯ. ಹೀಗಾಗಿ ಮಾಂಗಲ್ಯಸೂತ್ರ ಮಾರಿ ಮನೆಯಲ್ಲಿ ಶೌಚಾಲಯ ಕಟ್ಟಿಸಿದೆ ಎಂದು ಲತಾದೇವಿ ದಿವಾಕರ್ ಹೆಮ್ಮೆಯಿಂದ ಹೇಳುತ್ತಾರೆ.

lathadevi_toilet_build_1lathadevi_toilet_build_2

ಇದರಿಂದ ಬೇಸತ್ತ ಲತಾದೇವಿ ಮಾಂಗಲ್ಯಸೂತ್ರಕ್ಕಿಂತ ಮನೆಯಲ್ಲಿ ಶೌಚಾಲಯವೇ ಮುಖ್ಯ ಎಂದು ನಿರ್ಧರಿಸಿ ತಾಳಿ ಮಾರಿದ್ದಾರೆ. ಮನೆಯಲ್ಲಿ ಶೌಚಾಲಯ ನಿರ್ಮಿಸಿಲು ಪ್ರಧಾನಿ ಮೋದಿಯವರ ‘ಸ್ವಚ್ಛ್ ಭಾರತ್’ ಅಭಿಯಾನ ಪ್ರಭಾವ ಎನ್ನುವ ಲತಾದೇವಿ, ಆಭರಣಕ್ಕಿಂತ ಮೂಲಭೂತ ಅವಶ್ಯಕತೆಯಾದ ಶೌಚಾಲಯ ಮುಖ್ಯ. ಹೀಗಾಗಿ ಮಾಂಗಲ್ಯಸೂತ್ರ ಮಾರಿ ಮನೆಯಲ್ಲಿ ಶೌಚಾಲಯ ಕಟ್ಟಿಸಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಕೆಲ ತಿಂಗಳಿನಿಂದಲೂ ಈಕೆಯ ಕಾರ್ಯವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Comments are closed.