ಅಂತರಾಷ್ಟ್ರೀಯ

ಈ ಇಲಿಯ ಅವಸ್ಥೆ ನೋಡಿ….ಎಷ್ಟೇ ಮೆಟ್ಟಿಲು ಹತ್ತಿದರು ಮೇಲೆ ಹೋಗಲು ಆಗುತ್ತಿಲ್ಲ…!!

Pinterest LinkedIn Tumblr

https://youtu.be/DRd7RFrk0q8

ಮನಿಲಾ: ಮೇಲ್ಮಹಡಿಗೆ ಹೋಗೋಕೆ ಮೆಟ್ಟಿಲು ಹತ್ತಿಯೇ ಹೋಗ್ಬೇಕು. ಆದ್ರೆ ಇಲ್ಲೊಂದು ಇಲಿ ಎಷ್ಟು ಬಾರಿ ಮೆಟ್ಟಿಲು ಹತ್ತಿ ಮೇಲೆ ಹೋಗೋಕೆ ಪ್ರಯತ್ನಿಸಿದ್ರೂ ಸಾಧ್ಯವಾಗ್ಲಿಲ್ಲ. ಯಾಕಂದ್ರೆ ಅದು ಏರುತ್ತಿದ್ದದ್ದು ಸಾಮಾನ್ಯ ಮೆಟ್ಟಿಲಲ್ಲ. ಎಸ್ಕಲೇಟರ್‍ನ ಮೆಟ್ಟಿಲು. ಅದರಲ್ಲೂ ಕೆಳಮುಖವಾಗಿ ಹೋಗುತ್ತಿದ್ದ ಎಸ್ಕಲೇಟರ್ ಅದಾಗಿತ್ತು.

ಈ ರೀತಿ ಇಲಿಯೊಂದು ಮೆಟ್ಟಿಲು ಏರಲು ವ್ಯರ್ಥ ಪ್ರಯತ್ನ ಮಾಡುತ್ತಿರುವ ದೃಶ್ಯವನ್ನ ಫಿಲಿಪೈನ್ಸ್‍ನ ಮಾಲ್‍ವೊಂದರಲ್ಲಿ ಸೆರೆಹಿಡಿಯಲಾಗಿದೆ. ಇಲಿ ಮೆಟ್ಟಿಲೇನೋ ಹತ್ತುತ್ತಲೆ ಇತ್ತು. ಆದ್ರೆ ಅದು ಮೇಲಕ್ಕೆ ಹತ್ತಿದಂತೆಲ್ಲ ಮೆಟ್ಟಿಲು ಕೆಳಮುಖವಾಗಿ ಬರುತ್ತಿದ್ದರಿಂದ ಅದರ ಪ್ರಯತ್ನವೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿತ್ತು. ಇದನ್ನು ನೋಡಿದ ಮಾಲ್‍ಗೆ ಬಂದಿದ್ದ ಜನರು ಹಾಗೂ ಅಲ್ಲಿನ ಸಿಬ್ಬಂದಿ ಬಿಟ್ಟಿ ಮನೋರಂಜನೆ ಪಡೆದ್ರು.

Comments are closed.