ಕರಾವಳಿ

ಭಾಸ್ಕರ್ ಶೆಟ್ಟಿ ಕೊಲೆ: ಅಧಿಕಾರಿ ಕೂರುವ ಜಾಗದಲ್ಲಿ ಕೊಲೆಗಾರ; ಅನುಮಾನ ಹುಟ್ಟಿಸಿದ ತನಿಖಾಧಿಕಾರಿ ವರ್ತನೆ.?(ವೀಡಿಯೊ ವರದಿ)

Pinterest LinkedIn Tumblr

 

ಉಡುಪಿ: ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದಲ್ಲಿ ಈಗಿನ ತನಿಖಾಧಿಕಾರಿಯ ಮೇಲೆಯೇ ಸಾರ್ವಜನಿಕರಿಗೆ ಸಂಶಯದ ದೃಷ್ಟಿಯಿರುವುದರಿಂದ ತನಿಖಾಧಿಕಾರಯವರನ್ನು ಬದಲಾಯಿಸಿ ಅವರನ್ನು ತನಿಖೆಗೊಳಪಡಿಸಿ ಶೆಟ್ಟರ ಕುಟುಂಬಕ್ಕೆ ನ್ಯಾಯವೊದಗಿಸಲು ಎಲ್ಲೆಡೆ ಮಾತುಗಳು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪ್ರಕರಣದ ತನಿಖಾಧಿಯವರನ್ನು ಬದಲಾಯಿಸಿ ಕಾರ್ಕಳ ಎ.ಎಸ್ಪಿ ಡಾ ಸುಮನ್ ಡಿ.ಪಿ. ಅವರಿಗೆ ತನಿಖೆ ವರ್ಗಾಯಿಸಲಾಗಿದೆ.

Bhasakar Shetty_Murder Case_Officer Change (1)

(ಅಧಿಕಾರಿ ಕೂರುವ ಜಾಗದಲ್ಲಿ ಕೊಲೆಗಾರ ನವನೀತ್ ಶೆಟ್ಟಿ)

Bhasakar Shetty_Murder Case_Officer Change (2)

( ಜೀಪ್ ಹಿಂಭಾಗದಲ್ಲಿ ಕುಳಿತ ತನಿಖಾಧಿಕಾರಿ)

ಅಧಿಕಾರಿ ಕೂರುವ ಜಾಗದಲ್ಲಿ ಕೊಲೆಗಾರ..?
ಇನ್ನು ಮೊನ್ನೆದಿನ ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆತರುವ ವೇಳೆ ಪೊಲೀಸ್ ವಾಹನದಲ್ಲಿ ಅಧಿಕಾರಿ ಕೂರುವ ಮುಂಭಾಗದಲ್ಲಿ ಕೊಲೆಗಾರ ನವನೀತ್ ಶೆಟ್ಟಿ ಕುಳಿತು ಫೋಸು ನೀಡಿದ್ದು ಸಾರ್ವಜನಿಕರ ಆಕ್ರೋಷಕ್ಕೆ ಕಾರಣವಾಗಿದೆ. ನವನೀತ್ ಮುಂಭಗದ ಸೀಟಿನಲ್ಲಿ ಕುಳಿತರೇ ತನಿಖಾಧಿಕಾರಿ ವ್ರತ್ತನಿರೀಕ್ಷಕರು ಜೀಪ್ ಹಿಂಭಾಗದ ಸೀಟಿನಲ್ಲಿ ಕುಳಿತಿದ್ದು ಕಂಡುಬಂದಿತ್ತು. ಈ ಬಗ್ಗೆ ಕುಟುಂಬಸ್ಥರು ಪೊಲೀಸ್ ಹಿರಿಯ ಅಧಿಕಾರಿಗಳನ್ನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದ ಘಟನೆ ನಡೆದಿದೆ. ಈ ಬಗ್ಗೆ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು, ಈಗಾಗಲೇ ಈ ವಿಡಿಯೋವನ್ನು ಐಜಿಪಿಯವರಿಗೆ ಕಳುಹಿಸಿ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದರು. ಇನ್ನು ನಿರಂಜನ್ ಭಟ್ ಆಸ್ಪತ್ರೆಯಿಂದ ಕರೆತರುವ ವೇಳೆ ಆತನ ಮುಂದಿದ್ದ ತನಿಖಾಧಿಕಾರಿ ಮುಖಕ್ಕೆ ಡೈರಿಯನ್ನು ಅಡ್ಡವಿಟ್ಟು ಮುಚ್ಚಿಕೊಂಡು ಹೋಗಿದ್ದು ಕೂಡ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಪೊಲೀಸರಿಗೆ ಹಣ ವರ್ಗಾವಣೆ..?
ಪೊಲೀಸರಿಗೆ ಈ ಪ್ರಕರಣದಲ್ಲಿ ದೊಡ್ಡ ಮಟ್ಟದಲ್ಲಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಗಳು ಕೇಳಿಬರುತ್ತಿದೆ. ಯಾವ ಖಾತೆಯಿಂದ ಹಣ ವರ್ಗಾವಣೆಗೊಂಡು ಯಾರ್‍ಯಾರ ಖಾತೆಗೆ ಹೋಗಿದೆಯೆಂಬ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಲು ಸಾರ್ವಜನಿಕರು ಹಾಗೂ ಭಾಸ್ಕರ್ ಶೆಟ್ಟಿ ಕುಟುಂಬಿಕರು ಆಗ್ರಹಿಸಿದ್ದಾರೆ.

ಸಿ.ಐ.ಡಿ.ಗೆ ತನಿಖೆ..!
ಇನ್ನು ಅಗತ್ಯ ಬಿದ್ದಲ್ಲಿ ಸಿ.ಐಡಿ. ಅಥವಾ ಸಿ.ಬಿ.ಐ. ತನಿಖೆಗೆ ಆಗ್ರಹಿಸಿದರು ಅದಕ್ಕೆ ಬದ್ಧರಾಗಿರುವೆವು ಎಂದು ಉಸ್ತುವಾರಿ ಸಚಿವರು ಭರವಸೆ ನೀಡಿದ್ದಾರೆ. ಗುರುವಾರ ನೂತನ ಎಸ್ಪಿ ಬಾಲಕ್ರಷ್ಣ ಅವರು ಅಧಿಕಾರ ಸ್ವೀಕರಿಸಲಿದ್ದು ಬಳಿಕ ಹೊಸ ತಂಡ ರಚಿಸಿ ಕ್ರಮಕೈಗೊಳ್ಳಲಾಗುತ್ತದೆ.

Comments are closed.