https://youtu.be/y4h6pXM71bU
ಮಯೂರ್ಭಂಜ್: ಹಾವು ಮೊಟ್ಟೆ ನುಂಗುವುದು ಸಾಮಾನ್ಯ, ಆದರೆ ನುಂಗಿದ ಮೊಟ್ಟೆಯನ್ನು ಮತ್ತೆ ಹೊರ ಹಾಕಿರುವುದನ್ನು ಎಲ್ಲಾದರೂ ಕೇಳಿದ್ದೀರಾ? ಆದರೆ, ಇಲ್ಲೊಂದು ಮರಿ ಕಾಳಿಂಗ ಸರ್ಪ ಏಳು ಮೊಟ್ಟೆಗಳನ್ನು ನುಂಗಿ ಅವುಗಳಲ್ಲಿ ಆರು ಮೊಟ್ಟೆಗಳನ್ನು ಮತ್ತೆ ಹೊರಕ್ಕೆ ಹಾಕಿ ಅಚ್ಚರಿ ಮೂಡಿಸಿದೆ.
ಒಡಿಶಾದ ಮಯೂರ್ಭಂಜ್ನ ಬಲಧೀಯಾ ಎಂಬಲ್ಲಿ ಈ ಘಟನೆ ನಡೆದಿದೆ. ಬಲಧೀಯಾ ಹುಲಿ ಸಂರಕ್ಷಿತ ಪ್ರದೇಶವಾಗಿದ್ದು, ಕಾಳಿಂಗ ಸರ್ಪ ಒಂದಾದಮೇಲೊಂದರಂತೆ ಒಟ್ಟು 7 ಮೊಟ್ಟೆಗಳನ್ನು ತಿಂದಿದ್ದು, ಕೆಲ ಸಮಯದ ಬಳಿಕ ಮೊಟ್ಟೆಗಳನ್ನು ಒಂದಾದಮೇಲೊಂದರಂತೆ ಹೊರಕ್ಕೆ ಉಗುಳಿರುವ ದೃಶ್ಯಗಳೆಲ್ಲವೂ ಕ್ಯಾಮರಾದಲ್ಲಿ ಸೆರೆಯಾಗಿದೆ.
ಉರಗ ತಜ್ಞರು ಇದು ಬಹಳ ಅಪರೂಪ ಎನ್ನುತ್ತಾರೆ. ಸಾಮಾನ್ಯವಾಗಿ ಯಾವುದೇ ಹಾವು ನುಂಗಿರುವ ಮೊಟ್ಟೆಗಳನ್ನು ಮತ್ತೆ ಹೊರಹಾಕುವುದಿಲ್ಲ. ಅವುಗಳನ್ನು ಅರಗಿಸಿಕೊಳ್ಳುವ ಸಾಮರ್ಥ್ಯವಿದ್ದರೆ ಮಾತ್ರ ನುಂಗುತ್ತವೆ. ಇದು ಅಪರೂಪದ ಘಟನೆ ಎನ್ನುತ್ತಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿಮಾಡಿದೆ.
ಈ ಜಾತಿಯ ಕಾಳಿಂಗ ಸರ್ಪ ಆಗ್ನೇಯ ಏಷ್ಯಾ ಕಾಡುಗಳಲ್ಲಿ ಜಾಸ್ತಿಯಾಗಿ ಕಾಣಸಿಗುತ್ತದೆ ಎಂದು ಹೇಳಲಾಗಿದೆ.
Comments are closed.