https://youtu.be/eXgMsj0Ka9U
ಸಿಡ್ನಿ: ನೀವು ನೋಡ್ತಿರೋದು ಯಾವುದೋ ವಿಚಿತ್ರ ಜೀವಿಯ ಅಥವಾ ವಿರೂಪಗೊಂಡಿರೋ ಮನುಷ್ಯನಲ್ಲ. ಆದ್ರೂ ಮನುಷ್ಯ ಕಾರ್ ಅಪಘಾತಗಳಿಂದ ಬಾಚಾವಾಗಬೇಕಂದ್ರೆ ಆತನ ದೇಹದ ಆಕಾರ ಈ ಫೋಟೋದಲ್ಲಿರುವ ಗ್ರಹಮ್‍ನಂತೆ ಇರಬೇಕಂತೆ.
ಆಶ್ಚರ್ಯವಾಗ್ತಿದ್ಯಾ? ಹೌದು. ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿರುವ ಟ್ರಾನ್ಸ್‍ಪೋರ್ಟ್ ಆ್ಯಕ್ಸಿಡೆಂಟ್ ಕಮಿಷನ್‍ನವರು ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸೋಕೆ ಇಂತಹದ್ದೊಂದು ಮನುಷ್ಯನ ಮಾಡೆಲ್ ತಯಾರಿಸಿದ್ದಾರೆ. ಈ ಮಾಡೆಲ್‍ಗೆ ಗ್ರಹಮ್ ಅಂತ ಹೆಸರಿಡಲಾಗಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗ್ರಹಮ್‍ನ ತಲೆ ಹೆಲ್ಮೆಟ್‍ನ ಆಕಾರದಲ್ಲಿದ್ದು, ಮುಖ ಚಪ್ಪಟೆಯಾಗಿದೆ. ಇದರ ಮೂಗು ಮತ್ತು ಕಿವಿ ಗುಳಿ ಬಿದ್ದಂತೆ ಕಾಣುತ್ತದೆ. ಎಲ್ಲಾ ಪಕ್ಕೆಲುಬುಗಳ ಮಧ್ಯೆ ಏರ್‍ಬ್ಯಾಗ್‍ಗಳಿವೆ ಮತ್ತು ಗ್ರಹಮ್‍ಗೆ ಕತ್ತು ಇಲ್ಲ. ಗ್ರಹಮ್‍ನ ಮೂಳೆಯ ವಿನ್ಯಾಸ ಹೇಗಿದೆ? ಇದರ ನೆರವಿನಿಂದ ಅಪಘಾತಗಳಲ್ಲಿ ಬಚಾವಗೋ ಬಗೆ ಹೇಗೆ? ಎಂಬ ಬಗ್ಗೆ ಸಂಸ್ಥೆಯ ಅಧಿಕೃತ ವೆಬ್‍ಸೈಟ್‍ನಲ್ಲಿ ವಿವರಿಸಲಾಗಿದೆ.
ಆಸ್ಟ್ರೇಲಿಯಾದ ಕಲಾವಿದ ಪ್ಯಾಟ್ರಿಸಿಯಾ, ಟ್ರಾಮಾ ಸರ್ಜನ್ ಕ್ರಿಶ್ಚಿಯನ್ ಕೆನ್‍ಫೀಲ್ಡ್ ಹಾಗೂ ರಸ್ತೆ ಸುರಕ್ಷತಾ ಎಂಜಿನಿಯರ್ ಡಾ. ಡೇವಿಡ್ ಲೊಗನ್ ಎಂಬವರು ಒಟ್ಟಾಗಿ ಸೇರಿ ಈ ಮಾಡೆಲ್ ತಯಾರಿಸಿದ್ದಾರೆ. ನಮ್ಮ ದೇಹ ಬಹಳ ಸೂಕ್ಷ್ಮವಾದದ್ದು. ಆದ್ದರಿಂದ ಸುರಕ್ಷಿತವಾಗಿ ವಾಹನ ಚಾಲನೆ ಮಾಡಬೇಕು ಅನ್ನೋ ಸಂದೇಶ ಸಾರುವ ಉದ್ದೇಶದಿಂದ ಗ್ರಹಮ್‍ನನ್ನ ಸೃಷ್ಟಿಸಲಾಗಿದೆ.
Comments are closed.