https://youtu.be/sjw_ciV345Q
ಬೀಜಿಂಗ್: ಹಲವಾರು ಮಂದಿ ವಿಚಿತ್ರವಾದ ಸಾಹಸಗಳನ್ನ ಮಾಡಿ ವಿಶ್ವ ದಾಖಲೆ ಮಾಡಿರೋದನ್ನ ನೋಡಿರ್ತೀರ. ಆದ್ರೆ ಯಾವುದೋ ವಿಡಿಯೋ ನೋಡಿ ಅನುಕರಣೆ ಮಾಡಲು ಹೋದ್ರೆ ಏನಾಗುತ್ತೆ ಅನ್ನೋದಕ್ಕೆ ಇದೊಂದು ಬೆಸ್ಟ್ ಎಕ್ಸಾಂಪಲ್.
ಚೀನಾದಲ್ಲಿ ಯುವಕನೊಬ್ಬ ವಿಶ್ವ ದಾಖಲೆ ನಿರ್ಮಿಸಲು ಕಲ್ಲಂಗಡಿ ಹಣ್ಣಿಗೆ ಅತೀ ಹೆಚ್ಚು ರಬ್ಬರ್‍ಬ್ಯಾಂಡ್ ಹಾಕಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾನೆ. ಕಲ್ಲಂಗಡಿ ಹಣ್ಣಿಗೆ 700 ರಬ್ಬರ್‍ಬ್ಯಾಂಡ್‍ಗಳನ್ನು ಹಾಕಿ ಅದು ಸಿಡಿದಿದ್ದು ಇದರಿಂದ ಆ ವ್ಯಕ್ತಿಗೆ ಗಾಯವಾಗಿ ಆಸ್ಪತ್ರೆ ಸೇರಿದ್ದಾನೆ. ಯುವಕ ಮತ್ತು ಆತನ ಸ್ನೇಹಿತ ವಿಡಿಯೋವೊಂದನ್ನ ನೋಡಿ ಈ ಸಾಹಸ ಮಾಡಲು ಸ್ಫೂರ್ತಿ ಪಡೆದಿದ್ರಂತೆ. ಆ ವಿಡಿಯೋದಲ್ಲಿ ಅಮೆರಿಕದ ಇಬ್ಬರು ಕಲ್ಲಂಗಡಿ ಹಣ್ಣಿಗೆ 686 ರಬ್ಬರ್ ಬ್ಯಾಂಡ್‍ಗಳನ್ನ ಹಾಕಿದ್ರು.
ಇದೇ ರೀತಿ ಚೀನಾದ ಯುವಕರು ಮಾಡಲು ಯತ್ನಿಸಿ 50 ನಿಮಿಷದಲ್ಲಿ 728 ರಬ್ಬರ್ ಬ್ಯಾಂಡ್‍ಗಳನ್ನ ಹಾಕಿದ್ರು. ಇದರ ವಿಡಿಯೋವನ್ನ ಆನ್‍ಲೈನ್‍ನಲ್ಲಿ ಲೈವ್ ಸ್ಟ್ರೀಮಿಂಗ್ ಕೂಡ ಮಾಡ್ತಿದ್ರು. ಅಷ್ಟರಲ್ಲಿ ಕಲ್ಲಂಗಡಿ ಹಣ್ಣು ಸ್ಪೋಟಗೊಂಡಿದೆ. ಹಣ್ಣಿನ ಗಟ್ಟಿಯಾದ ಸಿಪ್ಪೆ ಯುವಕನ ಮುಖಕ್ಕೆ ಸಿಡಿದು ಗಾಯಗೊಂಡಿದ್ದಾನೆ. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎನ್ನುವಂತೆ ಆ ಯುವಕನ ಗಾಯದಿಂದಾಗಿಯೇ ವಿಡಿಯೋ ವೈರಲ್ ಆಗಿದೆ. ಈವರೆಗೆ ಚೀನಾದಲ್ಲಿ ಈ ವಿಡಿಯೋ 10 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ.
Comments are closed.