ಅಂತರಾಷ್ಟ್ರೀಯ

ವಿಶ್ವದಾದ್ಯಂತ ಜನರ ಗಮನ ಸೆಳೆಯುತ್ತಿರುವ ಮಾಜಿ ಸೈನಿಕನೋರ್ವ ತಯಾರಿಸಿದ ರಿಕ್ಷಾ ಓಡಿಸೋ ರೋಬೋ …ವೀಡಿಯೊ ಇಲ್ಲಿದೆ…

Pinterest LinkedIn Tumblr

ಬೀಜಿಂಗ್: ಹೋಟೆಲ್‍ನಲ್ಲಿ ರಿಸೆಪ್ಷನ್ ಕೆಲಸದಿಂದ ಹಿಡದು ಸಪ್ಲೈ ಮಾಡೋಕು ರೋಬೋಟ್‍ಗಳು ಬಂದಿವೆ. ಇದೀಗ ಮಾಜಿ ಸೈನಿಕರೊಬ್ಬರು ಆಟೋ ಓಡಿಸಲು ರೋಬೋ ಕಂಡುಹಿಡಿದಿದ್ದು, ವಿಶ್ವದಾದ್ಯಂತ ಜನರ ಗಮನ ಸೆಳೆದಿದೆ.

ಚೀನಾದ ಲುಯಾಂಗ್‍ನಲ್ಲಿರುವ ಮಾಜೀ ಸೈನಿಕರೊಬ್ಬರು ಟಾಂಗ ರೀತಿಯ ಆಟೋಗೆ ರೋಬೋಟ್‍ನನ್ನ ಸಾರಥಿಯನ್ನಾಗಿ ಮಾಡಿದ್ದಾರೆ. ವಿಶೇಷವೆಂದರೆ ಈ ರೋಬೋ ನೋಡಲು ಜಪಾನ್‍ನ ಎರಡನೇ ಮಾಯಾಯುದ್ಧ ಸೈನಿಕನಂತೆ ವಸ್ತ್ರ ವಿನ್ಯಾಸ ಮಾಡಲಾಗಿದೆ.

ಮಾಜಿ ಸೈನಿಕ ಡುಯಾನ್ ಶಾಯೋಜಿ ಇದನ್ನ ತಯಾರಿಸಿದ್ದು, ಈ ರಿಕ್ಷಾದಲ್ಲಿ ಒಬ್ಬರು ಕುಳಿತುಕೊಂಡು ಸವಾರಿ ಮಾಡಬಹುದಾಗಿದೆ. ನಿಧಾನವಾಗಿ ರಿಕಾವನ್ನ ಎಳೆದುಕೊಂಡು ಹೋಗುವ ರೋಬೋವನ್ನ ನೋಡಿ ನಮಗೂ ಇಂತಹದೊಂದು ರಿಕ್ಷಾ ಬೇಕಲ್ಲ ಎನಿಸುವುದರಲ್ಲಿ ಅನುಮಾನವೇ ಇಲ್ಲ.

Comments are closed.