ಮುಂಬೈ

ಮುಂಬೈ-ಪುಣೆ ಹೆದ್ದಾರಿಯಲ್ಲಿ ಸುರಿಯಿತು ಮೀನಿನ ಮಳೆ! ಇಲ್ಲಿದೆ ವೀಡಿಯೊ….

Pinterest LinkedIn Tumblr

https://youtu.be/zLVk6uH8eso

ಮುಂಬೈ: ಜಗತ್ತಿನಲ್ಲಿ ಕೆಲವೊಂದು ರಹಸ್ಯಗಳು ಇನ್ನೂ ರಹಸ್ಯವಾಗಿಯೇ ಉಳಿದಿದೆ. ಅದರಲ್ಲಿ ಮೀನಿನ ಮಳೆಯ ಬಗ್ಗೆ ನಾವು ಕೇಳಿದ್ದೇವೆ. ಇದೀಗ ಮುಂಬೈನಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಹೌದು. ವಿದೇಶಗಳಲ್ಲಿ ಮೀನಿನ ಮಳೆ ಸುರಿದಿದ್ದರ ಬಗ್ಗೆ ನೋಡಿದ್ದಾಗಿದೆ. ಆದ್ರೆ ಇದೀಗ ಮುಂಬೈ ಪುಣೆ ಹೆದ್ದಾರಿಯಲ್ಲಿ ಮೀನಿನ ಮಳೆಯಾಗಿರುವ ಸುದ್ದಿ ಹಬ್ಬಿದ್ದು, ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ವಾಟ್ಸಪ್‍ನಲ್ಲಿ ಹರಿದಾಡುತ್ತಿವೆ.

ಹೆದ್ದಾರಿಯಲ್ಲಿ ಸಾಗುತ್ತಿದ್ದ ಪ್ರಯಾಣಿಕರು ಮಳೆಯ ಜೊತೆಗೆ ಸುರಿದ ಮೀನುಗಳನ್ನು ಎತ್ತಿಕೊಳ್ಳುತ್ತಿರುವ ಫೋಟೋಗಳು ಸಿಕ್ಕಿವೆ. ಇದರಿಂದ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಕೂಡ ಆಗಿತ್ತೆಂದು ಹೇಳಲಾಗಿದೆ. ಇನ್ನೂ ಕೆಲವರು ಈ ದೃಶ್ಯಗಳನ್ನ ತಮ್ಮ ಮೊಬೈಲ್ ಫೋನ್‍ಗಳಲ್ಲಿ ಸೆರೆ ಹಿಡಿದಿದ್ದಾರೆ. ಆದ್ರೆ ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಪ್ರತಿಕ್ರಿಯೆ ನೀಡಿಲ್ಲ.

Comments are closed.