ಲಕ್ನೋ: ಪೊಲೀಸ್ ಪೇದೆಗಳು ಸಾರ್ವಜನಿಕವಾಗಿ ಹೊಡೆದಾಡಿಕೊಂಡ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ.
ಭಾನುವಾರದಂದು ಈ ಘಟನೆ ನಡೆದಿದ್ದು ಪೊಲೀಸರು ಹೊಡೆದಾಡುತ್ತಿರುವ ದೃಶ್ಯಗಳನ್ನು ಸ್ಥಳದಲ್ಲಿದ್ದವರು ಸೆರೆಹಿಡಿದಿದ್ದಾರೆ. ಈ ವಿಡಿಯೋ ವಾಟ್ಸಪ್‍ನಲ್ಲಿ ಹರಿದಾಡ್ತಿದೆ.
ಇಬ್ಬರು ಪೊಲೀಸರು ಒಬ್ಬರನ್ನೊಬ್ಬರು ತಳ್ಳಾಡುತ್ತಾ ಹೊಡೆದಾಡ್ತಿದ್ರೆ ಮತ್ತಿಬ್ಬರು ಅವರ ಜಗಳ ಬಿಡಿಸಲು ಪ್ರಯತ್ನಿಸುತ್ತಿದ್ರು. ಈ ವೇಳೆ ಅವರನ್ನು ತಡೆಯಲು ಲಾಠಿಯನ್ನು ಬಳಸಿದ್ರೂ ಇಬ್ಬರ ಜಗಳ ನಿಲ್ಲಲೇ ಇಲ್ಲ. ನಂತರ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬಂದ್ರೂ ಇಬ್ಬರ ಜಟಾಪಟಿ ಮುಂದುವರೆದಿತ್ತು.
ಜಗಳ ಯಾಕೆ: ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು, ಮುಖ್ಯವಾಗಿ ಟ್ರಕ್‍ಗಳು ಹಾದು ಹೋಗುತ್ತಿದ್ದ ರಸ್ತೆಯಲ್ಲಿ ಈ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ವೇಳೆ ಪೊಲೀಸರು ವಾಹನ ಚಾಲಕರಿಂದ ಲಂಚ ಪಡೆದಿದ್ದು, ಹಣವನ್ನು ಹಂಚಿಕೆ ಮಾಡಿಕೊಳ್ಳುವ ವಿಷಯವಾಗಿ ಜಗಳವಾಡ್ತಿದ್ರು ಅಂತ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದ್ರೆ ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಮಂಜಿಲ್ ಸೈನಿ ಈ ಬಗ್ಗೆ ಪತ್ರಿಕಾ ಸಂಸ್ಥೆಗೆ ಹೇಳಿಕೆ ನೀಡಿದ್ದು, ಜಗಳ ನಡೆದಿದ್ದು ಲಂಚದ ವಿಷವಾಗಿ ಅಲ್ಲ. ಟ್ರಾಫಿಕ್ ಜಾಮ್ ನಿಯಂತ್ರಿಸಲಿಲ್ಲ ಎಂಬ ಕಾರಣಕ್ಕೆ ಹೋಮ್ ಗಾರ್ಡ್ ಜೊತೆಗೆ ಜಗಳವಾಗಿದೆ ಎಂದಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಪೇದೆ ವೀರೇಂದ್ರ ಯಾದವ್ ಎಂಬವರನ್ನು ಅಮಾನತು ಮಾಡಲಾಗಿದೆ. ಅಲ್ಲದೆ ಈ ವಿಡಿಯೋ ಕೆಲವು ದಿನಗಳ ಹಿಂದಿನದ್ದು ಅಂತ ಪೊಲೀಸರು ಹೇಳಿದ್ದಾರೆ.
Comments are closed.