ಮನೋರಂಜನೆ

ತಮಿಳಿನ ಮಾತ್ರಾನ್ ಚಿತ್ರದಲ್ಲಿ ಸೂರ್ಯ ಜೊತೆ ನಟಿ ಕಾಜಲ್ ಅಗರವಾಲ್ ಮಾಡಿದ್ದ ‘ಲಿಪ್ ಲಾಕ್’ ಬಹಿರಂಗ ! ಇಲ್ಲಿದೆ ಆ ವೀಡಿಯೊ

Pinterest LinkedIn Tumblr

https://youtu.be/SUUU_mftG1E

ಚೆನ್ನೈ: ದಕ್ಷಿಣ ಚಿತ್ರರಂಗದಲ್ಲಿ ಈಗ ಕಾಜಲ್ ಅಗರವಾಲ್ ಬಹು ಬೇಡಿಕೆಯ ನಟಿ. ಈಗ ಬಾಲಿವುಡ್ ರಣದೀಪ್ ಹೂಡಾ ಜೊತೆ ಆನ್ ಸ್ಕ್ರೀನ್‍ನಲ್ಲೇ ದೋ ಲಫ್ಸನ್ ಜಿ ಕಹಾನಿ ಚಿತ್ರದಲ್ಲಿ ಆನ್ ಸ್ಕ್ರೀನ್‍ನಲ್ಲೇ ಲಿಪ್ ಲಾಕ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ಕಾಜಲ್ ಅಗರವಾಲ್ ಲಿಪ್ ಲಾಕ್ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಲಿಪ್ ಲಾಕ್ ಮಾಡಿದ್ದರು. 2012ರಲ್ಲಿ ತಮಿಳಿನ ಮಾತ್ರಾನ್ ಚಿತ್ರದಲ್ಲಿ ಸೂರ್ಯ ಜೊತೆ ಲಿಪ್ ಲಾಕ್ ಮಾಡಿದ್ದರು. ಆದರೆ ಅವರು ನಿಜವಾಗಿ ಲಿಪ್ ಲಾಕ್ ಮಾಡಿರಲಿಲ್ಲ. ಕ್ರೋಮಾ ಸ್ಟುಡಿಯೋದಲ್ಲಿ ಲಿಪ್ ಲಾಕ್ ಮಾಡುವ ಶೂಟಿಂಗ್ ನಡೆಸಿ ನಂತರ ಎಡಿಟ್ ಮಾಡಿ ಚಿತ್ರಕ್ಕೆ ಸೇರಿಸಿದ್ದರು. ಈ ವಿಡಿಯೋ ಕಳೆದ ವರ್ಷವೇ ಅಪ್‍ಲೋಡ್ ಆಗಿದ್ದರೂ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಏನಿದು ಕ್ರೋಮಾ ಸ್ಟುಡಿಯೋ ಶೂಟಿಂಗ್?
ಯಾವುದೋ ಜಲಪಾತ, ಯಾವುದೋ ಗ್ರಹದಿಂದ ಜೀವಿಗಳು ಬರುವುದನ್ನು ನೀವು ಚಲನಚಿತ್ರದಲ್ಲಿ ನೋಡಿರಬಹುದು. ಈ ದೃಶ್ಯಗಳಿರುವ ನೈಜವಾಗಿರುವ ಪ್ರದೇಶದಲ್ಲಿ ಶೂಟಿಂಗ್ ನಡೆಯುವುದಿಲ್ಲ. ಬದಲಾಗಿ ಹಸಿರು ಅಥವಾ ನೀಲಿ ಬಣ್ಣದ ಸ್ಕ್ರೀನ್‍ಗಳನ್ನು ಹಾಕಿರುವ ಕ್ರೋಮಾ ಸ್ಟುಡಿಯೋದಲ್ಲಿ ಶೂಟಿಂಗ್ ಮಾಡಲಾಗುತ್ತದೆ. ಕಂಪ್ಯೂಟರ್ ಮೂಲಕ ಕೃತಕ ಜಾಗವನ್ನು ಸೃಷ್ಟಿಸಿ ಬೇಕಾದ ಭಾಗ ಕಾಣುವಂತೆ ಶೂಟಿಂಗ್ ಮಾಡಲಾಗುತ್ತದೆ. ಹಸಿರು ಬಣ್ಣದ ಸ್ಟುಡಿಯೋದಲ್ಲಿ ಶೂಟಿಂಗ್ ವೇಳೆ ಪಾತ್ರಧಾರಿಗಳು ಅಥವಾ ವಸ್ತುವಿನ ಹಸಿರು ಬಟ್ಟೆಗಳಿದ್ದರೆ ಆ ಭಾಗ ಕ್ಯಾಮೆರಾದಲ್ಲಿ ಕಾಣುವುದಿಲ್ಲ.

Comments are closed.