https://youtu.be/gi2swk-WbcI
ಚಂಡೀಘಡ: ಹುಡುಗಿಯರು ಪ್ಯಾಂಟ್ ಟೀ ಶರ್ಟ್ ತೊಟ್ಟು ಬುಲೆಟ್ ಓಡಿಸೋದನ್ನ ನೋಡಿರ್ತೀರ. ಆದ್ರೆ ಇಲ್ಲೊಬ್ಬ ಪಂಜಾಬಿ ಸುಂದರಿ ಸಲ್ವಾರ್ ಕಮೀಜ್ ತೊಟ್ಟು ಪ್ರೊಫೆಷನಲ್ ಕುಸ್ತಿ ಪಟುವಿನೊಂದಿಗೆ ಕುಸ್ತಿ ಮಾಡಿದ್ದಾರೆ.
ಕಾಂಟಿನೆಂಟಲ್ ವ್ರೆಸ್ಲಿಂಗ್ ಎನ್‍ಟರ್‍ಟೈನ್‍ಮೆಂಟ್ ತರಬೇತಿ ಶಾಲೆಯ ಕಾರ್ಯಕ್ರಮವೊಂದರಲ್ಲಿ ಮಹಿಳಾ ಕುಸ್ತಿ ಪಟು ಬುಲ್ ಬುಲ್ ತನ್ನೊಂದಿಗೆ ಕುಸ್ತಿಗಿಳಿಯುವಂತೆ ಅಲ್ಲಿದ್ದವರಿಗೆ ಸವಾಲು ಹಾಕಿದ್ದರು. ಸವಾಲು ಸ್ವೀಕರಿಸಿದ ಮಹಿಳೆ ಕವಿತಾ ಸಲ್ವಾರ್‍ನಲ್ಲೇ ಕುಸ್ತಿಗಿಳಿದರು. ಮೊದಲಿಗೆ ಕುಸ್ತಿ ಪಟು ಕವಿತಾಳನ್ನು ಬಾಕ್ಸಿಂಗ್ ರಿಂಗ್‍ನ ಹಗ್ಗದ ಕಡೆ ನೂಕುತ್ತಾರೆ. ಆದ್ರೆ ನಂತರ ಕವಿತಾ ಆಕೆಯನ್ನು ಒಂದೆ ಬಾರಿಗೆ ನೆಲಕ್ಕುರುಳಿಸಿದಾಗ ಅಲ್ಲಿದ್ದ ಜನ ಚಪ್ಪಾಳೆ ಶಿಳ್ಳೆಗಳೊಂದಿಗೆ ಕವಿತಾರನ್ನ ಹುರಿದುಂಬಿಸುತ್ತಾರೆ.
ಕುಸ್ತಿ ಪಟುವನ್ನೇ ಕವಿತಾ ಹಿಗ್ಗಾಮುಗಾ ಬಾರಿಸಲು ಮುಂದಾದಾಗ ಅಲ್ಲಿದ್ದ ಹುಡುಗರು ಬಂದು, ಸಾಕು ಬಿಡಮ್ಮಾ…. ಅಂತ ಕವಿತಾರನ್ನ ಸುಮ್ಮನಿರಿಸುತ್ತಾರೆ. ಈ ಇಬ್ಬರ ಕುಸ್ತಿ ಕಾಳಗದ ವಿಡಿಯೋವನ್ನ ತರಬೇತಿ ಶಾಲೆಯವರು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕವಿತಾ ಹರಿಯಾಣದ ಮಾಜಿ ಪೊಲೀಸ್ ಅಧಿಕಾರಿಯಾಗಿದ್ದು, ಮಾರ್ಷಲ್ ಆರ್ಟ್ಸ್ ನಲ್ಲೂ ಪರಿಣಿತಿ ಹೊಂದಿದ್ದಾರೆ.
Comments are closed.