ಅಂತರಾಷ್ಟ್ರೀಯ

ಮೃಗಾಲಯದಲ್ಲಿ ಮಗುವಿನ ಮೇಲೆ ಸಿಂಹ ದಾಳಿ ! ಮಗುವಿಗೆ ಮಾತ್ರ ಏನೂ ಆಗಿಲ್ಲ…ಈ ವೀಡಿಯೋ ನೋಡಿ..ನಿಮಗೆ ಗೊತ್ತಾಗುತ್ತೆ…

Pinterest LinkedIn Tumblr

https://youtu.be/giKSrXY9-cQ

ಜಪಾನ್: ಮಗುವಿನೊಂದಿಗೆ ಸಮಯ ಕಳೆಯಲು ಮೃಗಾಲಯಕ್ಕೆ ಹೋಗಿದ್ದ ಪೋಷಕರಿಗೆ ಹೃದಯಾಘಾತವಾಗುವಂತಹ ಸನ್ನಿವೇಶವೊಂದು ಟೋಕಿಯೋದಲ್ಲಿ ಎದುರಾಗಿದೆ.

ಪ್ರಾಣಿಗಳನ್ನು ಮಕ್ಕಳು ಇಷ್ಟ ಪಡುವುದು ಸಾಮಾನ್ಯ. ಟಿವಿಯಲ್ಲಿ ನೋಡುವ ಪ್ರಾಣಿಗಳನ್ನು ನೇರವಾಗಿ ತೋರಿಸಿ ಮಕ್ಕಳನ್ನು ಖುಷಿಪಡಿಸಬೇಕೆಂದು ಪೋಷಕರು ಮಕ್ಕಳನ್ನು ಮೃಗಾಲಯಕ್ಕೆ ಕರೆದುಕೊಂಡು ಹೋಗುತ್ತಾರೆ. ಇದೇ ರೀತಿಯಾಗಿ ಟೋಕಿಯೋದಲ್ಲಿನ ಪೋಷಕರು ತಮ್ಮ 2ವರ್ಷದ ಮಗುವನ್ನು ಮೃಗಾಲಯವೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ.

ಆದರೆ, ಮಗುವಿನ ಮುಖದಲ್ಲಿ ಸಂತಸ ನೋಡಲು ಹೋಗಿದ್ದ ಪೋಷಕರಿಗೆ ಹೃದಯಕ್ಕೆ ಆಘಾತವಾಗುವಂತಹುದ್ದನ್ನು ಮೃಗಾಲಯದ ಸಿಂಹವೊಂದು ಮಾಡಿದೆ.

ಟೋಕಿಯೋದ ಚಿಬಾ ಝುವಾಲಜಿಕಲ್ ಪಾರ್ಕ್ ನಲ್ಲಿದ್ದ ಸಿಂಹವನ್ನು ನೋಡಿದ ಮಗುವೊಂದು ನಂತರ ಹಿಂದಕ್ಕೆ ತಿರುಗಿ ನಿಂತಿದೆ. ಈ ವೇಳೆ ಮಗುವನ್ನು ನೋಡಿದ ಸಿಂಹ ಭೇಟೆಯಾಡುವ ರೀತಿಯಲ್ಲಿ ಹೊಂಚು ಹಾಕಿ ಇದ್ದಕ್ಕಿದ್ದಂತೆ ಮಗುವಿನ ಮೇಲೆ ದಾಳಿ ಮಾಡಿದೆ. ಮಗು ಹಾಗೂ ಸಿಂಹದ ಮಧ್ಯೆ ಗಾಜಿನ ಪರದೆ ಇದ್ದ ಕಾರಣ ಸಿಂಹಕ್ಕೆ ಏನನ್ನೂ ಮಾಡಲು ಸಾಧ್ಯವಾಗಿಲ್ಲ. ಇದೀಗ ಈ ವಿಡಿಯೋ ಸಾಕಷ್ಟು ಸುದ್ದಿ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್ನು ಸಿಂಹದ ದಾಳಿ ಕುರಿತಂತೆ ಸ್ಪಷ್ಟನೆ ನೀಡಿರುವ ಮೃಗಾಲಯದ ಅಧಿಕಾರಿಗಳು, ಮೃಗಾಲಯಕ್ಕೆ ಯಾವುದೇ ಮಕ್ಕಳು ಬಂದರೂ ಸಿಂಹ ಇದೇ ರೀತಿಯಾಗಿ ವರ್ತಿಸುತ್ತಿರುತ್ತದೆ. ಸಿಂಹವು ಮಕ್ಕಳೊಂದಿಗೆ ಆಟವಾಡಲು ಬಯಸುತ್ತದೆ. ಸಾರಿ ಲಯನ್. ಯಾವುದೇ ಪೋಷಕರು ನಿನ್ನೊಂದಿಗೆ ಆಟವಾಡಲು ಮಕ್ಕಳನ್ನು ಬಿಡಲು ಇಚ್ಛಿಸುವುದಿಲ್ಲ ಎಂದು ಹೇಳಿದ್ದಾರೆ.

Comments are closed.