
ಮುಂಬೈ: ಬಾಲಿವುಡ್ ನಟ ಅಮಿರ್ ಖಾನ್ ಅವರ ಪತ್ನಿ ಕಿರಣ್ ರಾವ್ ಹೆಸರಲ್ಲಿ ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ಕಿರಣ್ ರಾವ್ ಅವರು ಬಾಂದ್ರಾ ಕುರ್ಲಾದ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಿರಣ್ ರಾವ್ ಹೆಸರಲ್ಲಿ ಸರಣಿ ಚಾಟ್ ಮಾಡುತ್ತಿದ್ದು, ಕುಟುಂಬ ಸದಸ್ಯರು, ಗೆಳೆಯರ ಜತೆ ಚಾಟ್ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಚಾಟ್ ಬಗ್ಗೆ ಸ್ನೇಹಿತರೊಬ್ಬರು ಮಾಹಿತಿ ನೀಡಿದ ಹಿನ್ನಲೆಯಲ್ಲಿ ಕಿರಣ್ ಫೇಸ್ ಬುಕ್ ನಲ್ಲಿ ಪರಿಶೀಲಿಸಿದಾಗ ನಕಲಿ ಖಾತೆಗೆ ಬಗ್ಗೆ ತಿಳಿದು ಬಂದಿದೆ. ಇನ್ನು ಈ ವಿಷಯವನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತ ಪಡಿಸಿದ್ದಾರೆ.
Comments are closed.