https://youtu.be/sFMteNXdqeo
ಸಿಡ್ನಿ: ಪಶ್ಚಿಮ ಆಸ್ಟ್ರೇಲಿಯಾದ ಕರಾವಳಿ ತೀರದಲ್ಲಿರುವ ಶಾರ್ಕ್ ಬೇ ನಲ್ಲಿ 70 ಟೈಗರ್ ಶಾರ್ಕ್‍ಗಳು ಒಂದು ತಿಮಿಂಗಿಲವನ್ನು ಕಿತ್ತು ತಿನ್ನುವ ದೃಶ್ಯ ಡ್ರೋನ್‍ನಲ್ಲಿ ಸೆರೆಯಾಗಿದೆ.
ಹಸಿದ ಶಾರ್ಕ್‍ಗಳು ತಿಮಿಂಗಿಲವನ್ನು ಕಿತ್ತು ತಿನ್ನುವ ದೃಶ್ಯವನ್ನ ಎರಡು ಬೋಟ್‍ಗಳಲ್ಲಿದ್ದ ಪ್ರವಾಸಿಗರು ಕಣ್ಣಾರೆ ನೋಡಿ ಬೆರಗಾಗಿದ್ದರು.
ಈ ಎಲ್ಲಾ ದೃಶ್ಯಾವಳಿಗಳನ್ನ ಇಕೋ ಅಬ್ರಾಲ್‍ಹೊಸ್ ಎಂಬವರು ಡ್ರೋನ್‍ನಲ್ಲಿ ಸೆರೆಹಿಡಿದಿದ್ರು. ಶಾರ್ಕ್‍ಗಳು ಒಟ್ಟಾಗಿ ತಿಮಿಂಗಿಲವನ್ನು ಸುತ್ತುವರಿದು ಅದರ ಮಾಂಸವನ್ನು ಎಳೆದಾಡುತ್ತಿದ್ರೆ ತಿಳಿಯಾದ ಸಮುದ್ರದ ನೀರು ರಕ್ತದಿಂದ ಕೆಂಪು ಬಣ್ಣಕ್ಕೆ ತಿರುಗಿತ್ತು.
15 ಮೀ ಉದ್ದ, 36 ಸಾವಿರ ಕೆಜಿ ತೂಕವಿರುವ ಈ ತಿಮಿಂಗಿಲವನ್ನ ಶಾರ್ಕ್‍ಗಳೇ ಕೊಂದಿದ್ದವೋ ಅಥವಾ ಅದು ಮೊದಲೇ ಸಾವನ್ನಪ್ಪಿತ್ತೋ ಎಂಬ ಬಗ್ಗೆ ಮಾಹಿತಿ ಇಲ್ಲ.
Comments are closed.