ಅಂತರಾಷ್ಟ್ರೀಯ

ಬೆಕ್ಕಿನೊಂದಿಗೆ ಕಾದಾಡಿದ ಹಾವು ಕೊನೆಗೆ ಕಪ್ಪೆಗೆ ಆಹಾರವಾಯಿತು….ಈ ವೀಡಿಯೋ ನೋಡಿ…

Pinterest LinkedIn Tumblr

https://youtu.be/6fuahhvQlmg

ಬ್ಯಾಂಕಾಕ್: ಬೇರೆ ಪ್ರಾಣಿಗೆ ಆಹಾರವಾಗುವುದರಿಂದ ತಪ್ಪಿಸಿಕೊಳ್ಳಲು ಕೊನೆಯ ಗಳಿಗೆವರೆಗೂ ಪ್ರಯತ್ನ ಮಾಡುತ್ತವೆ. ಆದ್ರೆ ಎರಡೆರೆಡು ಪ್ರಾಣಿಗಳು ಬಲಿ ಪಡೆಯಲು ಬಂದ್ರೆ ಹೇಗಿರುತ್ತೆ. ಇಂತಹದ್ದೇ ಒಂದು ಸನ್ನಿವೇಶ ಥೈಲ್ಯಾಂಡ್‍ನಲ್ಲಿ ನಡೆದಿದ್ದು, ಬೆಕ್ಕಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಹಾವೊಂದು ಕಪ್ಪೆಗೆ ಆಹಾರವಾಗಿದೆ.

ಹೌದು. ಬೆಕ್ಕು ಹಾವು, ಕಪ್ಪೆ ಹಾವು ಪ್ರಾಣಕ್ಕಾಗಿ ಕಾದಾಟ ನಡೆಸುವುದನ್ನು ನೋಡಿರ್ತೀರಾ. ಆದ್ರೆ ಥೈಲ್ಯಾಂಡ್‍ನಲ್ಲಿ ಹಾವೊಂದು ಬೆಕ್ಕಿನಿಂದ ಪ್ರಾಣ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುವಾಗಲೇ ಕಪ್ಪೆಗೆ ಬಲಿಯಾಗಿದೆ. ತನ್ನ ಅರ್ಧ ದೇಹವನ್ನು ಕಪ್ಪೆ ನುಂಗಿದ್ರೂ ಹಾವು ಮಾತ್ರ ಬೆಕ್ಕಿನೊಂದಿಗೆ ಕಾಳಗ ನಡೆಸುತ್ತಿದ್ದ ದೃಶ್ಯಗಳು ರೋಚಕವೆನಿಸಿದೆ.

ಮೊದಲು ಹಾವು ತನ್ನನ್ನು ತಿನ್ನಲು ಬಂದ ಬೆಕ್ಕಿನಿಂದ ತಪ್ಪಿಸಿಕೊಳ್ಳಲು ಪ್ರತಿದಾಳಿ ನಡೆಸುತ್ತ ಜೀವರಕ್ಷಣೆಗೆ ಮುಂದಾಗಿದೆ. ಆದ್ರೆ ಅಲ್ಲೇ ಇದ್ದ ಕಪ್ಪೆಯೊಂದು ಹಾವಿನ ಬಾಲದಿಂದ ನುಂಗುತ್ತ ಬಂದಿದೆ. ತನ್ನ ಅರ್ಧದೇಹವನ್ನು ಕಪ್ಪೆ ನುಂಗಿದ್ರು ಹಾವಿಗೆ ಅರಿವೇ ಆಗಿಲ್ಲ. ಆದ್ರೆ ಕೊನೆಗೆ ಕಪ್ಪೆಗೆ ಹಾವು ಬಲಿಯಾಗಿದೆ.

Write A Comment