ಮನೋರಂಜನೆ

ಐಪಿಎಲ್ ನಲ್ಲಿ ಮಂಕಾದ ಅಶ್ವಿನ್ ಜಾದೂ! ಧೋನಿ ದೂರ…ಬಲುದೂರ …ಮುಂದಿನ ಭವಿಷ್ಯ ?

Pinterest LinkedIn Tumblr

Dhoni-Ashwin

ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಠ ಸ್ಪಿನ್ನರ್ ಎನಿಸಿಕೊಂಡಿರುವ ರವಿಚಂದ್ರನ್ ಅಶ್ವಿನ್ ಟೀಂ ಇಂಡಿಯಾಗೆ ಖಾಯಂ ಬೌಲರ್ ಆದ ನಂತರ ತಂಡ ಹಲವು ಟೂರ್ನಿಗಳನ್ನು ಗೆಲ್ಲಲು ಸಾಧ್ಯವಾಗಿತ್ತು. ಅಂತೆಯೇ ತಮ್ಮ ನಿರ್ದಿಷ್ಠ ಬೌಲಿಂಗ್ ದಾಳಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಿಳಿ(ಐಸಿಸಿ) ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದರು.

ಕರಾರುವಕ್ಕಾದ ಬೌಲಿಂಗ್ ದಾಳಿಯಿಂದ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಅಶ್ವಿನ್ ನಿಸ್ಸೀಮಾ. ಅಶ್ವಿನ್ ಸ್ಪಿನ್ ಮೋಡಿಗೆ ಎದುರಾಳಿ ಬ್ಯಾಟ್ಸ್ ಮನ್ ಗಳು ತತ್ತರಿಸುತ್ತಿದ್ದರು. ಅಂತಹ ಕೇರಂ ಬೌಲ್ ಖ್ಯಾತಿಯ ಬೌಲರ್ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯಲ್ಲಿ ಯಾಕೋ ಮಂಕಾದಂತೆ ಕಾಣುತ್ತಿದೆ.

ಹೌದು ಸದ್ಯದ ಪರಿಸ್ಥಿತಿಯಲ್ಲಿ ಅಶ್ವಿನ್ ರಿಂದ ಯಶಸ್ವಿ ಬೌಲಿಂಗ್ ಸ್ಪೆಲ್ ನೋಡಲು ಸಾಧ್ಯವಾಗಿಲ್ಲ. ಟೀಂ ಇಂಡಿಯಾದ ಸೀಮಿತ ಓವರ್ ಗಳ ನಾಯಕ ಎಂಎಸ್ ಧೋನಿ ಗರಡಿಯಲ್ಲಿ ಪಳಗಿದ್ದ ಅಶ್ವಿನ್ ಧೋನಿಯ ಸ್ಟ್ರಾಟರ್ಜಿಗೆ ತಕ್ಕಂತೆ ಬೌಲ್ ಮಾಡಿ ಎದುರಾಳಿಗಳನ್ನು ಕೆಡ್ಡಕ್ಕೆ ತಳ್ಳುತ್ತಿದ್ದರು. ಅಶ್ವಿನ್ ಸಾಮಥ್ಯವನ್ನು ಅರಿತಿದ್ದ ಧೋನಿ ಎಂತಹ ಸಂದಿಘ್ನ ಪರಿಸ್ಥಿತಿಯಲ್ಲೂ ಅಶ್ವಿನ್ ಗೆ ಬೌಲಿಂಗ್ ನೀಡುತ್ತಿದ್ದರು. ಈಗಾಗಿಯೇ ಎರಡು ವರ್ಷಗಳ ನಿಷೇಧಕ್ಕೊಳಗಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಲು ಸಾಧ್ಯವಾಗಿತ್ತು.

ಅಂತಹ ಧೋನಿಯ ಅಚ್ಚುಮೆಚ್ಚಿನ ಬೌಲರ್ ಆಗಿದ್ದ ಅಶ್ವಿನ್ ಸದ್ಯ ಧೋನಿ ತಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನು ಕಳೆದುಕೊಂಡಿದ್ದಾರಾ…? ಇಗೊಂದು ಸಂಶಯ ಎಲ್ಲರಲ್ಲೂ ಕಾಡುತ್ತಿದೆ. ಹೌದು ಸದ್ಯ ಐಪಿಎಲ್ ನ ನೂತನ ತಂಡವಾಗಿರುವ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ನ ನಾಯಕನಾಗಿರುವ ಧೋನಿ ಅಶ್ವಿನ್ ರನ್ನ ಕೈಬಿಡದೆ ತಮ್ಮ ತಂಡದಲ್ಲೇ ಆಡುವಂತೆ ಮಾಡಿದ್ದರು. ಆದರೆ ಪುಣೆ ಪರ ಅಶ್ವಿನ್ ಆಡಿರುವ 10 ಪಂದ್ಯಗಳ ಪೈಕಿ ಕೇವಲ 3 ವಿಕೆಟ್ ಪಡೆದಿದ್ದಾರೆ. ಇದು ಅಶ್ವಿನ್ ವೃತ್ತಿ ಬದುಕಿನ ಕೆಟ್ಟ ಸಾಧನೆಯಾಗಿದೆ. ಇನ್ನು ಅಶ್ವಿನ್ ರನ್ನು ನಂಬಿ ಧೋನಿ ಸ್ಲಾಗ್ ಓವರ್ ಗಳನ್ನು ನೀಡುತ್ತಿಲ್ಲ. ಸ್ಲಾಗ್ ಓವರ್ ಗಳಲ್ಲಿ ಅಶ್ವಿನ್ ದುಬಾರಿಯಾಗುತ್ತಿದ್ದಾರೆ.

ಧೋನಿ ನಾಯಕತ್ವದಲ್ಲಿ ಕಳೆದ 19 ಪಂದ್ಯಗಳಲ್ಲಿ ಅಶ್ವಿನ್ ತಮ್ಮ ಪಾಲಿನ ಓವರ್ ಗಳನ್ನು ಕಂಪ್ಲೀಂಟ್ ಮಾಡಲು ಆಗಿಲ್ಲ. 19 ಪಂದ್ಯಗಳ ಪೈಕಿ 10 ಪಂದ್ಯಗಳಲ್ಲಿ ಮಾತ್ರ ನಿಗದಿತ ನಾಲ್ಕು ಓವರ್ ಗಳನ್ನು ಮುಗಿಸಿದ್ದಾರೆ. ಇನ್ನುಳಿದಂತೆ 9 ಪಂದ್ಯಗಳಲ್ಲಿ ಎರಡು ಮೂರು ಓವರ್ ಗಳಷ್ಟೇ ಮಾಡಿದ್ದಾರೆ. ಇಂತಹ ಅಂಕಿ ಅಂಶಗಳನ್ನು ನೋಡಿದರೆ ಧೋನಿ ಅಶ್ವಿನ್ ಮೇಲೆ ಇಟ್ಟಿದ್ದ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿ. ಇನ್ನು ಅಶ್ವಿನ್ ರ ಕಳೆದ ಪ್ರದರ್ಶನದಿಂದಾಗಿ ಧೋನಿ ಇತರ ಸ್ಪಿನ್ ಬೌಲರ್ ಗಳನ್ನು ಅವಲಂಬಿಸುವಂತೆ ಮಾಡಿದೆ. ಸದ್ಯದ ಮಟ್ಟಿಗೆ ಇದು ನಿಜ. ಹೌದು ತಮಿಳುನಾಡಿನ ಸ್ಪಿನ್ ಬೌಲರ್ ಮುರುಗನ್ ಅಶ್ವಿನ್ ರನ್ನು ಧೋನಿ ಅವಲಂಬಿಸಿದಂತಿದೆ. ಅಶ್ವಿನ್ ಖಾತೆಯಲ್ಲಿದ್ದ ಓವರ್ ಗಳನ್ನು ಮುರುಗನ್ ಕೈಲಿ ಧೋನಿ ಮಾಡುತ್ತಿದ್ದಾರೆ. ತಮಗೆ ನೀಡಿದ ಜವಾಬ್ದಾರಿಯನ್ನು ಮುರುಗನ್ ಸಹ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಪುಣೆ ಪರ ಆಡುತ್ತಿರುವ ಮುರುಗನ್ 9 ಪಂದ್ಯಗಳ ಪೈಕಿ 7 ವಿಕೆಟ್ ಪಡೆದು ನಾಯಕನ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.
ಯಶಸ್ವಿ ಸ್ಪೆಲ್ ಮೂಲಕ ಮುರುಗನ್ ಚಾಲ್ತಿಗೆ ಬರುತ್ತಿದ್ದರೆ ಇತ್ತ ಅಶ್ವಿನ್ ಅಸ್ತಂಗತರಾಗುತ್ತಿದ್ದಾರಾ ಎಂಬ ಸಂಶಯ ಮೂಡದೆ ಇರದು…

Write A Comment