ಅಂತರಾಷ್ಟ್ರೀಯ

ಜಗತ್ತಿನ ಅತ್ಯಂತ ದೊಡ್ಡ ಹೆಬ್ಬಾವು ಮಲೇಷ್ಯಾದಲ್ಲಿ ಪತ್ತೆ ! ಅಬ್ಬಾ ಈ ವೀಡಿಯೋ ನೋಡಿ…

Pinterest LinkedIn Tumblr

https://youtu.be/Ahdblx06saw

ಕೌಲಾಲಂಪುರ್: ಸಿನಿಮಾಗಳಲ್ಲಿ ಅಥವಾ ಅನಿಮೇಷನ್ ಚಿತ್ರಗಳಲ್ಲಿ ದೈತ್ಯ ಹಾವುಗಳನ್ನ ನೋಡಿರ್ತೀರ. ಆದ್ರೆ ಮಲೇಷ್ಯಾದಲ್ಲಿ ಬರೋಬ್ಬರಿ 250 ಕೆಜಿ ತೂಕದ ಹೆಬ್ಬಾವೊಂದು ಕಳೆದ ವಾರ ಸಿಕ್ಕಿದೆ.

ಇಲ್ಲಿನ ಪೆನಾಂಗ್ ದ್ವೀಪದ ಪಾಯಾ ತೆರುಬಾಂಗ್ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್ ಬಳಿ ರೆಟಿಕ್ಯುಲೇಟೆಡ್ ಪೈಥಾನ್ ಜಾತಿಗೆ ಸೇರಿದ ದೈತ್ಯ ಹಾವು ಸಿಕ್ಕಿದೆ. ಮೊದಲಿಗೆ ಮರದ ಕೆಳಗೆ ಸುರುಳಿ ಸುತ್ತಿಕೊಂಡಿದ್ದ ಈ ಹೆಬ್ಬಾವನ್ನು ನೋಡಿದ ಫ್ಲೈಓವರ್‍ನ ಕೆಲಸಗಾರರು ಸಾರ್ವಜನಿಕ ರಕ್ಷಣಾ ಇಲಾಖೆಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ರು.

ಅರ್ಧ ಗಂಟೆಯ ಪ್ರಯತ್ನದ ನಂತರ ಸಾರ್ವಜನಿಕ ರಕ್ಷಣಾ ಪಡೆಯ ಸಿಬ್ಬಂದಿ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಈ ಹಾವು 26 ಅಡಿ (8 ಮೀ.) ಉದ್ದವಿದ್ದು 250 ಕೆಜಿ ತೂಗುತ್ತದೆ. ಅಮೆರಿಕದ ಮಿಸ್ಸೌರಿಯಲ್ಲಿರುವ ಮೆದುಸಾ ಎಂಬ ಹೆಸರಿನ ಹಾವು 24 ಅಡಿ ಉದ್ದವಿದ್ದು ಜಗತ್ತಿನ ಅತ್ಯಂತ ದೊಡ್ಡ ಹಾವು ಎನಿಸಿಕೊಂಡಿತ್ತು. ಆದರೆ ಈಗ ಸಿಕ್ಕ ಹಾವು ಈ ದಾಖಲೆಯನ್ನು ಮುರಿದಿದ್ದು, ಗಿನ್ನಿಸ್ ದಾಖಲೆ ಸಂಸ್ಥೆಯ ಅಧಿಕಾರಿಗಳು ಹಾವನ್ನು ಪರಿಶೀಲಿಸಿ ಇದನ್ನು ಜಗತ್ತಿನ ಅತ್ಯಂತ ದೊಡ್ಡ ಹಾವು ಎಂದು ಅಧಿಕೃತವಾಗಿ ಘೋಷಿಸಬೇಕಿತ್ತು. ಆದರೆ ಬಿಬಿಸಿ ವರದಿಯ ಪ್ರಕಾರ ಈ ಹಾವು ಭಾನುವಾರದಂದು ಮೊಟ್ಟೆಗಳನ್ನಿಟ್ಟು ಸಾವನ್ನಪ್ಪಿದೆ ಎನ್ನಲಾಗಿದೆ.

ಇದಕ್ಕಿಂತಲೂ ದೈತ್ಯವಾದ ಹಾವುಗಳು ಕಾಡಿನಲ್ಲಿವೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ. 1912ರಲ್ಲಿ ಇಂಡೋನೇಷ್ಯಾದಲ್ಲಿ ಪತ್ತೆಯಾಗಿದ್ದ 33 ಅಡಿ ಉದ್ದದ ಹೆಬ್ಬಾವನ್ನು ಹತ್ಯೆ ಮಾಡಲಾಗಿತ್ತು. ಅಲ್ಲದೆ 2009ರಲ್ಲಿ 42 ಅಡಿ ಉದ್ದದ ಹೆಬ್ಬಾವಿನ ಮೂಳೆಯ ಪಳೆಯುಳಿಕೆ ಕೊಲಂಬಿಯಾದ ವಿಜ್ಞಾನಿಗಳಿಗೆ ಸಿಕ್ಕಿತ್ತು.

Write A Comment