ಅಂತರಾಷ್ಟ್ರೀಯ

ಮಾರ್ಬಲ್ಸ್‍ಗಳಿಂದ ಸಂಗೀತ ಸೃಷ್ಟಿಸಿದ ಸಂಗೀತ ಮಾಂತ್ರಿಕ ! ಈ ವೀಡಿಯೋ ನೋಡಿ ಆನಂದಿಸಿ

Pinterest LinkedIn Tumblr

ಗುಥೆನ್ಬರ್ಗ್: ಕೇವಲ ಸಂಗೀತವಾದ್ಯಗಳಿಂದ ಮಾತ್ರವಲ್ಲದೇ ಹಲವು ವಸ್ತುಗಳಿಂದ ಕಲಾವಿದರು ಸಂಗೀತ ಸೃಷ್ಟಿ ಮಾಡ್ತಾರೆ. ಆದ್ರೆ ಯಾವತ್ತಾದ್ರೂ ಮಾರ್ಬಲ್ಸ್‍ಗಳಿಂದ ಸಂಗೀತ ಹೊರಬಂದಿರುವುದನ್ನು ಆಲಿಸಿದ್ದೀರಾ. ಇದೀಗ ಮ್ಯೂಸಿಕ್ ಮಾಂತ್ರಿಕನೊಬ್ಬ ಮಾರ್ಬಲ್ಸ್‍ಗಳಿಂದ ಸಂಗೀತ ಸೃಷ್ಟಿ ಮಾಡಿದ್ದಾನೆ.

ಹೌದು. ಸ್ವೀಡನ್ ದೇಶದ ಸಂಗೀತಗಾರ ಮಾರ್ಟಿನ್ ಮೊಲಿನ್ ಮಾರ್ಬಲ್ಸ್‍ಗಳಿಂದ ಎಂದು ಕೇಳಿರದ ಸಂಗೀತವನ್ನು ನಿರ್ಮಿಸಿದ್ದಾನೆ. ಬರೋಬ್ಬರಿ 2 ಸಾವಿರ ಮಾರ್ಬಲ್ಸ್‍ಗಳನ್ನು ಇದಕ್ಕಾಗಿ ಬಳಕೆ ಮಾಡಿದ್ದು, ಆತನೇ ನಿರ್ಮಿಸಿರುವ ಮರದ ಮೆಷಿನ್ ಸಹಾಯದಿಂದ ಸಂಗೀತ ಸೃಷ್ಟಿಸಿ ಜಾದು ಮಾಡಿದ್ದಾನೆ.

ಈ ಸಂಗೀತದ ಮೆಷಿನ್ ನಿರ್ಮಿಸಲು ಆತ ಬರೋಬ್ಬರಿ 1 ವರ್ಷ 2 ತಿಂಗಳು ತೆಗೆದುಕೊಂಡಿದ್ದಾನೆ. ಈ ಯಂತ್ರ ತಿರುಗಿತ್ತದ್ದಂತೆಯೇ ಮೇಲಿರುವ ಮಾರ್ಬಲ್ಸ್‍ಗಳು ಕೆಳಗೆ ಬೀಳುತ್ತವೆ. ಇದರಿಂದ ಕೆಳಗಿರುವ ಡ್ರಮ್ಸ್‍ಗಳ ಮೇಲೆ ಒಂದೇ ಬಾರಿಗೆ ಒಂದೊಂದಾಗಿ ಬಾಲ್ಸ್‍ಗಳು ಬೀಳುವುದರಿಂದ ವಿಶೇಷವಾದ ಸಂಗೀತ ಹೊರಹೊಮ್ಮುತ್ತದೆ.

Write A Comment