ಅಂತರಾಷ್ಟ್ರೀಯ

ಮನೆಯ ಸ್ವಿಮ್ಮಿಂಗ್ ಪೂಲ್‍ನಲ್ಲಿ ಮೊಸಳೆ ಕಂಡು ದಂಗಾದ ! ಧೈರ್ಯದಿಂದ ಮೊಸಳೆ ಹಿಡಿಯುವಲ್ಲಿ ಸಫಲನಾದ ! ಈ ವೀಡಿಯೋ ಒಮ್ಮೆ ನೋಡಿ…

Pinterest LinkedIn Tumblr

ಲೇಕ್‍ಲ್ಯಾಂಡ್: ಮನೆಯಲ್ಲಿಯೇ ಸ್ವಿಮ್ಮಿಂಗ್ ಮಾಡಲು ಪೂಲ್ ಕಟ್ಟಿಸಿರುತ್ತಾರೆ. ಆದ್ರೆ ಇದ್ದಕ್ಕಿದ್ದಂತೆ ಸ್ವಿಮ್ಮಿಂಗ್ ಪೂಲ್‍ವೊಳಗೆ ಮೊಸಳೆ ಬಂದ್ರೆ ಹೇಗಿರುತ್ತೆ ಹೇಳಿ. ಇಂತಹದ್ದೇ ಒಂದು ಘಟನೆ ಫ್ಲೋರಿಡದಲ್ಲಿ ನಡೆದಿದೆ.

ಹೌದು. ಫ್ಲೋರಿಡಾದ ಲೇಕ್‍ಲ್ಯಾಂಡ್ ನಗರದ ಮನೆಯೊಂದರಲ್ಲಿ 9 ಅಡಿ ಉದ್ದದ ಮೊಸಳೆಯೊಂದು ಸ್ವಿಮ್ಮಿಂಗ್ ಪೂಲ್‍ನಲ್ಲಿ ಪ್ರತ್ಯಕ್ಷವಾಗಿ ಮನೆಯವರನ್ನು ಆತಂಕ್ಕೀಡುಮಾಡಿದ ಘಟನೆ ನಡೆದಿದೆ. ಹತ್ತಿರದ ಕೆರೆಯಿಂದ ಆಗಮಿಸಿದ್ದ ಮೊಸಳೆ ಸ್ವಿಮ್ಮಿಂಗ್ ಪೂಲ್‍ನಲ್ಲಿ ವಾಸ್ತವ್ಯ ಹೂಡಿದ್ದು ಮನೆಯವರನ್ನು ಚಕಿತಗೊಳ್ಳವಂತೆ ಮಾಡಿದೆ.

ಮನೆಯ ಮಾಲೀಕ ಕ್ರೈಗ್ ಲಿಯರ್ ಮಂಗಳವಾರ ಬೆಳಗ್ಗೆ ಸ್ವಿಮ್ಮಿಂಗ್ ಪೂಲ್‍ನ ನೀರಿನಲ್ಲಿ ಗುಳ್ಳೆಗಳು ಏಳುತ್ತಿದದ್ದನ್ನು ನೋಡಿ ಗಾಲ್ಫ್ ಬಾಲ್ ಇರಬಹುದೆಂದು ತಿಳಿದುಕೊಂಡಿದ್ದಾರೆ. ಆದ್ರೆ ಸ್ವಿಮ್ಮಿಂಗ್ ಪೂಲ್ ಬಳಿ ಬಂದಾಗ ಅವರಿಗೆ ಯಾವುದೇ ಬಾಲ್ ಕಾಣಿಸಿಲ್ಲ. ಸ್ವಲ್ಪ ದಿಟ್ಟಿಸಿ ನೀರಿನ ಆಳಕ್ಕೆ ಕಣ್ಣು ಹಾಯಿಸಿದಾಗ ಮೊಸಳೆ ಇರುವುದು ಕಂಡುಬಂದಿದೆ.

ತಕ್ಷಣ ಎಚ್ಚೆತ್ತ ಮಾಲೀಕ ಮೊಸಳೆಯನ್ನು ಹಿಡಿಯಲು ಪೂರ್ವ ತಯಾರಿ ನಡೆಸಿ ಅದು ತಪ್ಪಿಸಿಕೊಳ್ಳದಂತೆ ಮುಂಜಾಗ್ರತೆ ವಹಿಸಿ ಹಗ್ಗದ ಸಹಾಯದಿಂದ ಮೊಸಳೆಯನ್ನು ಕಟ್ಟಿ ಪೂಲ್‍ನಿಂದ ಮೇಲಕ್ಕೆ ಎತ್ತಿದ್ದಾರೆ. ಇದೆಲ್ಲಾ ದೃಶ್ಯಗಳನ್ನು ಕ್ರೈಗ್ ಪತ್ನಿ ಸೆರೆಹಿಡಿದಿದ್ದಾರೆ.

Write A Comment