ಅಂತರಾಷ್ಟ್ರೀಯ

ಬುಲ್ಡೋಜರ್ ಓಡಿಸ್ತಿದ್ದಾಳೆ 3ರ ಪೋರಿ

Pinterest LinkedIn Tumblr

ಕ್ವೀನ್ಸ್ ಲ್ಯಾಂಡ್: ಮಕ್ಕಳು ಏನೇ ಮಾಡಿದ್ರೂ ಚೆನ್ನಾ. ಆದರಲ್ಲೂ ತಮ್ಮ ವಯಸ್ಸಿಗಿಂತಲೂ ಮೀರಿದ ಸಾಧನೆ ಮಾಡಿದರೆ ಅದನ್ನು ನೋಡಲು ಮತ್ತೂ ಚೆನ್ನಾ.

ಹೌದು. ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್‍ನಲ್ಲಿ 3 ವರ್ಷದ ಪೋರಿಯೊಬ್ಬರು ಬುಲ್ಡೋಜರ್ ಓಡಿಸಿ ಸುದ್ದಿ ಮಾಡಿದ್ದಾಳೆ. ಬುಲ್ಡೋಜರ್ ಅಂದರೆ ಕನ್‍ಫ್ಯೂಸ್ ಆಗಬೇಡಿ. ಆಟದ ಬುಲ್ಡೋಜರ್ ಸಖತ್ ಆಗಿ ಓಡಿಸುತ್ತಿದ್ದಾಳೆ.

ಕ್ವೀನ್ಸ್ ಲ್ಯಾಂಡ್‍ನಲ್ಲಿರುವ ಮೂರು ವರ್ಷದ ಕೋರಾ ತನ್ನ ಮನೆಯ ಅಂಗಳದಲ್ಲಿ ಕತ್ತರಿಸಿದ ಹುಲ್ಲನ್ನು ಬುಲ್ಡೋಜರ್‍ನಲ್ಲಿ ತೆಗೆದುಕೊಂಡು ಹೋಗಿ ಎಸೆಯುತ್ತಿದ್ದಾಳೆ. ಗೇರ್ ಚೆಂಜ್ ಮಾಡಿ ಹುಲ್ಲು ಎಸೆಯುತ್ತಿರುವ ಈದೃಶ್ಯವನ್ನು ತಂದೆ ಸೆರೆ ಹಿಡಿದಿದ್ದಾರೆ.

Write A Comment