ಅಂತರಾಷ್ಟ್ರೀಯ

ಹಾರುವ ಅಳಿಲನ್ನು ನೋಡಿದ್ದೀರಾ!

Pinterest LinkedIn Tumblr

https://youtu.be/rjJMpAiSBDw

ಒಟ್ಟವಾ: ಪಕ್ಷಿಗಳು ಹಾರುವ ಶಕ್ತಿಹೊಂದಿವೆ. ಆದರೆ ಪ್ರಾಣಿಗಳಿಗೆ ಈ ಶಕ್ತಿಯಿಲ್ಲ. ಆದ್ರೆ ಅಳಿಲು ಮರಿಯೊಂದು ಬಾವಲಿಯಂತೆ ಹಾರಿರುವ ಅಪರೂಪದ ಘಟನೆ ಕೆನಡಾದಲ್ಲಿ ನಡೆದಿದೆ.

ಆಶ್ಚರ್ಯವಾದ್ರೂ ಇದು ನಿಜ. ಕೆನಡಾದಲ್ಲಿ ಅಳಿಲು ಮರಿಯೊಂದು ತನ್ನ ಮಾಲೀಕನ ಕೈಯಿಂದ ಚಂಗನೆ ಕೆಳಗೆ ಹಾರಿದೆ. ಮೆಟ್ಟಿಲುಗಳ ಮೇಲೆ ನಿಂತಿದ್ದ ಮಾಲೀಕನ ಕೈ ಮೇಲಿಂದ ಕೆಳಗೆ ಹಾರಿಬಂದು ಕ್ಯಾಮೆರಾಕ್ಕೆ ಡಿಕ್ಕಿ ಹೊಡೆದಿದೆ.

ಬಾವಲಿಯಂತೆ ಹಾರಿದ ಅಳಿಲು ಕಾಲನ್ನು ರೆಕ್ಕೆಯಂತೆ ಬಳಸಿಕೊಂಡು ಹಾರಾಟ ನಡೆಸಿದೆ. ಕ್ಯಾಮೆರಕ್ಕೆ ಡಿಕ್ಕಿಹೊಡೆದ ಅಳಿಲಿನ ಸ್ಥಿತಿ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಳಿಲು ಹಾರುವುದು ಅಪರೂಪವಾದರೂ ಹಾರುವಂತಹ ಅಳಿಲುಗಳು ಹೆಚ್ಚಾಗಿ ಉತ್ತರ ಅಮೆರಿಕ, ಫೆಸಿಫಿಕ್ ಹಾಗೂ ಕೆನಡಾದಲ್ಲಿ ಕಂಡುಬರುತ್ತವೆ.

Write A Comment