https://youtu.be/SiLClTLYyHw
ಲಕ್ನೋ: ಸಾಮಾನ್ಯವಾಗಿ ಯಾರಿಗಾದರೂ ಕೋಪ ಬಂದಾಗ ಹೊಟ್ಟೆಗೇನ್ ಮಣ್ಣ್ ತಿಂತ್ಯಾ ಅಂತ ಬೈಯ್ಯೋದು ಮಾಮಾಲಿ. ಆದರೆ ಇಲ್ಲೊಬ್ಬ ವ್ಯಕ್ತಿ ಪ್ರತಿದಿನ ಮರಳನ್ನೇ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.
ಉತ್ತರಪ್ರದೇಶ ನಿವಾಸಿಯಾದ 45 ವರ್ಷದ ಹಂಸರಾಜ್ ಕಳೆದ 25 ವರ್ಷಗಳಿಂದ ಮಣ್ಣು ತಿನ್ನುತ್ತಿದ್ದರೂ ಅದರಿಂದ ಇವರಿಗೆ ಯಾವುದೇ ದುಷ್ಪರಿಣಾಮವಾಗಿಲ್ಲ. ಸುತ್ತಮುತ್ತಲ ಗ್ರಾಮದಲ್ಲಿ ಇವರು ಸ್ಯಾಂಡ್‍ಮ್ಯಾನ್ ಎಂದೇ ಜನಪ್ರಿಯರಾಗಿದ್ದಾರೆ.
ವೃತ್ತಿಯಲ್ಲಿ ಗಾರೆ ಕಾರ್ಮಿಕರಾದ ಹಂಸರಾಜ್ ಮಣ್ಣನ್ನು ಇಷ್ಟಪಟ್ಟು ತಿನ್ನುತ್ತಾರೆ. ರಾಜ್ ಅವರು ಮರಳು ತಿನ್ನದಂತೆ ಮಾಡಲು ಸ್ನೇಹಿತರು ಮತ್ತು ಕುಟುಂಬದವರು ಎಷ್ಟೇ ಕಷ್ಟಪಟ್ಟರೂ ಸಾಧ್ಯವಾಗಿಲ್ಲ. ಬೇರೆ ಬೇರೆ ರೀತಿಯ ಮರಳನ್ನ ಸವಿಯಲು ರಾಜ್ ಊರಿಂದ ಊರಿಗೆ ತಿರುಗುತ್ತಾರೆ. ಕೆಲವೊಂದು ಬಾರಿ ಇಟ್ಟಿಗೆಯನ್ನೇ ಪುಡಿ ಮಾಡಿ ತಿಂದದ್ದೂ ಇದೆ. ಎಷ್ಟೇ ಮರಳು ತಿಂದರೂ ರಾಜ್ ಅವರು ಆರೋಗ್ಯವಾಗಿರುವುದು ಎಲ್ಲರಿಗೂ ಆಶ್ಚರ್ಯ . ಈ ರೀತಿ ಮರಳು ತಿನ್ನುವ ಅಥವಾ ಯಾವುದೇ ತಿನ್ನಬಾರದ ವಸ್ತುವನ್ನು ತಿನ್ನುವ ಖಾಯಿಲೆಗೆ ಪೀಕಾ ಡಿಸಾರ್ಡ್‍ರ್ ಎಂದು ಕರೆಯುತ್ತಾರೆ.