ರಾಷ್ಟ್ರೀಯ

ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸಿರುವ ಸಂಸತ್ತಿನಲ್ಲಿ ಪ್ರಧಾನಿ ಮೋದಿ ನಿದ್ದೆ ! ಈ ಚಿತ್ರ ಸುಳ್ಳು…ಸಾಕ್ಷಿ ಇಲ್ಲಿದೆ ನೋಡಿ…

Pinterest LinkedIn Tumblr

modi

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರು ಮಾತನಾಡುತ್ತಿರುವಾಗ ಹತ್ತಿರದಲ್ಲಿ ಕುಳಿತಿದ್ದ ಪ್ರಧಾನಿ ನರೇಂದ್ರ ಮೋದಿ ನಿದ್ದೆ ಮಾಡುತ್ತಿದ್ದರು ಎಂದು ತೋರಿಸುವ ಚಿತ್ರ ಎರಡು ದಿನಗಳಿಂದ ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸಿದೆ.

ಭಾರತದ ಸಂವಿಧಾನ ದಿನದಂದೇ ಲೋಕಸಭೆಯಲ್ಲಿ ಮೋದಿ ನಿದ್ದೆ ಮಾಡುತ್ತಿದ್ದಾರೆ ಎಂದು ತೋರಿಸುವ ಚಿತ್ರ ಅದಾಗಿತ್ತು. ಎಡೆಬಿಡದೆ ವಿದೇಶ ಯಾತ್ರೆಗಳನ್ನು ಮಾಡುತ್ತಿರುವುದರಿಂದ ಅದರ ಸುಸ್ತು, ಹಾಗಾಗಿ ಮೋದಿ ನಿದ್ದೆಗೆ ಜಾರಿದ್ದಾರೆ ಎನ್ನುವ ಟ್ರೋಲ್‌ಗಳು, ಮೋದಿ ಕ್ಯಾಂಡಿಕ್ರಷ್ ಆಡುತ್ತಿದ್ದಾರೆ, ಮೋದಿ ವಿದೇಶದ ಕನಸು ಕಾಣುತ್ತಿದ್ದಾರೆ ಎಂಬ ಜೋಕ್ ಗಳು ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಹರಿದಾಡಿದ್ದವು. ಮಾಧ್ಯಮಗಳು ಕೂಡಾ ಈ ಚಿತ್ರಗಳನ್ನು ಪ್ರಕಟಿಸಿ ಮೋದಿ ನಿದ್ದೆ ಮಾಡುತ್ತಿದ್ದಾರೆ ಎಂಬ ಶೀರ್ಷಿಕೆ ನೀಡಿದ್ದವು.

ಟ್ವಿಟರ್‌ನಲ್ಲಿ #PMJetLag ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್ ಕೂಡಾ ಆಗಿ ಬಿಟ್ಟಿತು. ಬ್ರಿಟನ್ ಪ್ರವಾಸ ಮುಗಿಸಿ ಟರ್ಕಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಭಾಗವಹಿಸಿ ಬಂದ ಮೋದಿಗೆ ಸುಸ್ತು ಸಹಜ. ಹಾಗೆ ಅವರು ಕೆಲ ಕ್ಷಣ ನಿದ್ದೆ ಹೋಗಿದ್ದಾರೆ ಎಂಬ ಮಾತುಗಳೂ ಕೇಳಿ ಬಂದವು. ಮೋದಿ ತಲೆ ಬಗ್ಗಿಸಿ ನಿದ್ದೆ ಮಾಡುತ್ತಿದ್ದಾರೆ ಎಂದು ತೋರುವ ಚಿತ್ರ ವೈರಲ್ ಆಗುತ್ತಿದ್ದಂತೆ ಹೆಚ್ಚಿನವರು ಇದು ಮೋದಿ ನಿದ್ದೆ ಮಾಡುತ್ತಿದ್ದಾರೆ ಎಂದೇ ನಂಬಿಕೊಂಡರು. ಆದರೆ ನಿಜವಾಗಿಯೂ ಮೋದಿ ಮಾಡಿದ್ದಾರಾ? ಇಲ್ಲ..

ಮೋದಿ ಲೋಕಸಭೆಯಲ್ಲಿ ನಿದ್ದೆ ಮಾಡುತ್ತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ವೀಡಿಯೋ ತುಣುಕು ಸಿಕ್ಕಿದೆ. ಈ ವಿಡಿಯೋ ಗಮನಿಸಿದರೆ ನಿಜಾಂಶ ತಿಳಿಯುತ್ತದೆ.

ಮೋದಿ ನಿದ್ದೆ ಮಾಡುತ್ತಿರುವ ಫೋಟೋ ಗಮನಿಸಿ. ಅದರಲ್ಲಿ 12.25 ಎಂಬ ಸಮಯ ಕಾಣಬಹುದು. 12.25ಕ್ಕೆ ರಾಜ್‌ನಾಥ್ ಸಿಂಗ್ ಭಾಷಣ ಮಾಡುವಾಗ ಕೆಲವೇ ಕೆಲವು ಸೆಕೆಂಡುಗಳ ಕಾಲ ತಲೆ ತಗ್ಗಿಸಿದ್ದರು. ಆ ಕ್ಷಣದಲ್ಲಿ ಫೋಟೋ ಕ್ಲಿಕ್ಕಿಸಿದ್ದು, ಮೋದಿ ನಿದ್ದೆ ಮಾಡುವಂತೆ ಕಾಣುತ್ತದೆ.

ವಿಡಿಯೋದಲ್ಲಿ 12. 24 ಕ್ಕೆ ರಾಜ್‌ನಾಥ್ ಸಿಂಗ್ ಭಾಷಣ ಮಾಡುವ ಮುನ್ನ ಹಾಗೂ 12.25ಕ್ಕೆ ಭಾಷಣ ಮಾಡುತ್ತಿರುವಾಗ ಮೋದಿ ಸ್ವಲ್ಪ ಹೊತ್ತು ತಲೆ ತಗ್ಗಿಸಿ ಆಮೇಲೆ ತಲೆ ಮೇಲೆತ್ತಿರುವುದನ್ನು ಕಾಣಬಹುದು. ಅಂದರೆ ಮೋದಿ ಸಂಸತ್ತಿನಲ್ಲಿ ನಿದ್ದೆ ಮಾಡಿಲ್ಲ ಎಂಬುದು ಸತ್ಯ. ಅದಕ್ಕೆ ಸಾಕ್ಷಿಯೇ ಈ ವಿಡಿಯೋ ತುಣುಕು.

Write A Comment