ಅಂತರಾಷ್ಟ್ರೀಯ

ಇರಾಕ್‍ನ ಮರುಭೂಮಿಯಲ್ಲಿ ಹರಿಯುತ್ತಿದೆ ಮರಳಿನ ನದಿ! ಇಲ್ಲಿದೆ ವಿಡಿಯೋ

Pinterest LinkedIn Tumblr

sand-river1

ಬಾಗ್ದಾದ್: ಮರುಭೂಮಿಯಲ್ಲಿ ನೀರು ಸಿಗುವುದೇ ಕಷ್ಟ. ಹೀಗಿರುವಾಗ ಆಶ್ಚರ್ಯಕರ ರೀತಿಯಲ್ಲಿ ಇರಾಕಿನ ಮರುಭೂಮಿಯಲ್ಲಿ ಮರಳು ನೀರಿನಂತೆ ಹರಿಯುತ್ತಿರುವುದು ಕಂಡುಬಂದಿದೆ.

ಕಳೆದ ವಾರ ಹವಾಮಾನ ವೈಪರಿತ್ಯದಿಂದಾಗಿ ಇರಾಕಿನ ಮರುಭೂಮಿಯಲ್ಲಿ ಆಲಿಕಲ್ಲುಮಳೆ ಸುರಿದಿತ್ತು. ವಿಪರೀತ ಮಳೆಯಿಂದಾಗಿ ಸುರಿದ ಆಲಿಕಲ್ಲು ಇದೀಗ ಮರುಭುಮಿಯಲ್ಲಿ ನೀರಿನಂತೆ ಹರಿಯುತ್ತಿದೆ. ಇದನ್ನು ನೋಡಿದರೆ ನಿಜವಾಗಿಯೂ ಮರಳಿನ ನದಿ ಹರಿಯುತ್ತಿದೆ ಎಂಬಂತೆ ಕಾಣುತ್ತದೆ. ಆದರೆ ಇದು ಮರಳಲ್ಲ ಮಂಜುಗಟ್ಟಿರುವ ಮಳೆನೀರು. ಹರಿಯುತ್ತಿರುವ ನದಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಗಾಲ್ಫ್ ಬಾಲಿನ ಗಾತ್ರದ ಮಂಜಿನ ಗಡ್ಡೆಗಳಿರುವುದು ಗೊತ್ತಾಗುತ್ತದೆ.

ಒಣಪ್ರದೇಶದಲ್ಲಿ ಈ ರೀತಿ ಮಂಜಿನ ನೀರು ಹರಿಯುತ್ತಿರುವುದನ್ನು ಕಂಡು ಜನರು ಆಶ್ಚರ್ಯಚಕಿತರಾಗಿದ್ದಾರೆ. ಅಲ್ಲದೆ ಇದಕ್ಕೆ ಮರಳಿನ ನದಿ (ಸ್ಯಾಂಡ್ ರಿವರ್) ಎಂದೇ ಕರೆಯುತ್ತಿದ್ದಾರೆ. ಇದೀಗ ಈ ಮರಳಿನ ನದಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಇರಾಕಿನಲ್ಲಿ ಅತಿವೃಷ್ಟಿ ಉಂಟಾಗಿ ಜನರು ಸಾವನ್ನಪ್ಪಿದ್ದು ಈಜಿಪ್ಟ್, ಇಸ್ರೇಲ್, ಜೋರ್ಡನ್ ಮತ್ತು ಸೌದಿ ಅರೇಬಿಯಾದಲ್ಲಿಯೂ ಅಪಾರ ಹಾನಿ ಸಂಭವಿಸಿದೆ.(PTV)

https://youtu.be/uY70kxONgfU

Write A Comment