ಅಂತರಾಷ್ಟ್ರೀಯ

ಮಾಲ್ ನಲ್ಲಿ ಎಸ್ಕಲೇಟರ್‍ಗೆ ಮಹಿಳೆ ಬಲಿ ! ಸಾಮಾಜಿಕ ಜಾಲತಾಣಗಳಲ್ಲಿ ಮಾಲ್ ವಿರುದ್ಧ ಭಾರೀ ಅಕ್ರೋಶ…ವಿಡಿಯೋ ನೋಡಿ …

Pinterest LinkedIn Tumblr

china

ಬೀಜಿಂಗ್: ಚೀನಾದ ದೊಡ್ಡ ಶಾಪಿಂಗ್ ಮಾಲ್‍ನಲ್ಲಿ ಎಸ್ಕಲೇಟರ್‍ಗೆ ಮಹಿಳೆಯೊಬ್ಬರು ಸಿಕ್ಕಿ ಮೃತಪಟ್ಟಿದ್ದಾರೆ. 30 ವರ್ಷದ ಮಹಿಳೆಯೊಬ್ಬರು ಭಾನುವಾರ ತನ್ನ ಮಗನದೊಂದಿಗೆ ಹುಬೈ ಪ್ರಾಂತ್ಯದಲ್ಲಿರುವ ಜಿಂಗ್‍ಹ್ಯೂ ನಗರದಲ್ಲಿರುವ ದೊಡ್ಡ ಶಾಪಿಂಗ್ ಮಾಲ್‍ಗೆ ವಸ್ತುವನ್ನು ಖರೀದಿಸಲು ಬಂದಿದ್ದರು.

ಮಾಲ್ ಪ್ರವೇಶಿಸಿ ಎಸ್ಕಲೇಟರ್ ಮೂಲಕ ಮಳಿಗೆ ಹತ್ತಿ ಇನ್ನೇನು ಮಳಿಗೆಯನ್ನು ತಲುಪುವಾಗ ಎಸ್ಕಲೇಟರ್ ತುದಿ ಭಾಗ ಇದ್ದಕ್ಕಿದ್ದಂತೆ ಓಪನ್ ಆಗಿದೆ. ಓಪನ್ ಆದ ಕೂಡಲೇ ತಾಯಿ ಮಗನನ್ನು ಎತ್ತಿ ಮೇಲಕ್ಕೆ ಎಸೆದಿದ್ದು ಅಲ್ಲಿದ್ದ ಸಿಬ್ಬಂದಿ ಮಗನನ್ನು ರಕ್ಷಿಸಿದ್ದಾರೆ. ಆದರೆ ಮಹಿಳೆಯನ್ನು ರಕ್ಷಿಸಲು ಸಿಬ್ಬಂದಿ ಯತ್ನಿಸಿದರೂ ಆಕೆ ಎಸ್ಕಲೇಟರ್ ಅಡಿಯಲ್ಲೇ ಹೋಗುತ್ತಿದ್ದ ಕಾರಣ ಆಕೆ ಅಲ್ಲೇ ಮೃತಪಟ್ಟಿದ್ದಾರೆ.

ಎಸ್ಕಲೇಟರ್‍ಗೆ ಈಕೆ ಬಲಿಯಾಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲ ಸೆರೆಯಾಗಿದೆ. ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಮಾಲ್ ವಿರುದ್ಧ ಭಾರೀ ಅಕ್ರೋಶ ವ್ಯಕ್ತವಾಗುತ್ತಿದೆ.

https://youtu.be/Q9jBuPSXnPs

Write A Comment