ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ರಿಜಿಸ್ಟರ್ ಕುಂದಾಪುರ 2 ಯೋಜನ ಕಚೇರಿ ವ್ಯಾಪ್ತಿಯ ಕಾಳವರ ವಲಯದ ಜ್ಞಾನ ವಿಕಾಸ ಕೇಂದ್ರ ಸದಸ್ಯರಿಗೆ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಮಲ್ಲಿಗೆ ಕೃಷಿ ತರಬೇತಿ ಹಾಗೂ ಗಿಡ ವಿತರಣೆ ಕಾರ್ಯಕ್ರಮವು ಕಾಳಾವರ ವಲಯ ಕಛೇರಿಯಲ್ಲಿ ನಡೆಯಿತು.

ಧ.ಗ್ರಾ. ಯೋಜನೆ ತಾಲೂಕು ಯೋಜನಾಧಿಕಾರಿ ಸುಧೀರ್ ಅವರು ಉದ್ಘಾಟಿಸಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯು ಸಮಾಜಕ್ಕೆ ಪೂರಕವಾದ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮವು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿದೆ. ಮಲ್ಲಿಗೆ ಕೃಷಿ ತರಬೇತಿಯು ಮಹಿಳೆಯರನ್ನು ಸ್ವ ಉದ್ಯೋಗಗಳನ್ನಾಗಿ ಮಾಡುವುದರಲ್ಲಿ ಸಂಶಯವಿಲ್ಲ. ಮಲ್ಲಿಗೆ ಕೃಷಿ ತರಬೇತಿಯನ್ನು ಉತ್ತಮವಾಗಿ ಪಡೆದುಕೊಳ್ಳುವ ಬಗ್ಗೆ , ಮಲ್ಲಿಗೆ ಕೃಷಿಯಿಂದ ಆದಾಯ ಗಳಿಸಬೇಕೆಂದರು.
ಯಡಮೊಗೆ ಬ್ರಾಹ್ಮಿ ನರ್ಸರಿಯ ಮಾಲೀಕರಾದ ಅಶೋಕ್ ಅವರು ಮಲ್ಲಿಗೆ ಗಿಡ ಪೋಷಣೆಯ ಬಗ್ಗೆ, ಹಾಕಬೇಕಾದ ಗೊಬ್ಬರಗಳ ಬಗ್ಗೆ, ಮಲ್ಲಿಗೆ ಗಿಡ ನೆಡುವ ವಿಧಾನಗಳ ಬಗ್ಗೆ , ರಕ್ಷಣೆಯ ಬಗ್ಗೆ ಮಾಹಿತಿಯನ್ನು ನೀಡಿದರು.
15 ವರ್ಷಗಳಿಂದ ಮಲ್ಲಿಗೆ ಕೃಷಿ ಮಾಡಿಕೊಂಡು ಸಾಧನೆ ಮಾಡಿದ ಮಾಲತಿ ಶೆಟ್ಟಿಯವರು ತಮ್ಮ ಮಲ್ಲಿಗೆ ಕೃಷಿಯ ಬಗ್ಗೆ ಸ್ವಂತ ಅನುಭವಗಳನ್ನು ಹಂಚಿಕೊಂಡರು.
ಕಾಳಾವರ ವಲಯ ಅಧ್ಯಕ್ಷ ಸುಬ್ರಮಣ ಆಚಾರ್ಯ, ಸ್ಥಳೀಯ ಒಕ್ಕೂಟದ ಅಧ್ಯಕ್ಷ ಸುನಿಲ್ ಕುಮಾರ್, ಮಲ್ಲಿಗೆ ಕೃಷಿಯಲ್ಲಿ ಸಾಧನೆ ಮಾಡಿದ ಜ್ಞಾನವಿಕಾಸದ ಸದಸ್ಯ ಮಾರುತಿ ಶೆಟ್ಟಿ, ವಲಯದ ಮೇಲ್ವಿಚಾರಕ ದಿವಾಕರ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಕವಿತಾ, ಸ್ಥಳೀಯ ಸೇವಾ ಪ್ರತಿನಿಧಿಗಳಾದ ಶ್ರೀದೇವಿ, ಲಲಿತ, ಹಾಗೂ ಮಲ್ಲಿಗೆ ಕೃಷಿ ತರಬೇತಿಯನ್ನು ಪಡೆದುಕೊಂಡು ಮಲ್ಲಿಗೆ ಕೃಷಿ ಮಾಡುವ 15 ಜ್ಞಾನವಿಕಾಸ ಕೇಂದ್ರ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 15 ಜ್ಞಾನವಿಕಾಸ ಸದಸ್ಯರಿಗೆ ತಲಾ 15ರಂತೆ ಉತ್ತಮ ಗುಣಮಟ್ಟದ ಮಲ್ಲಿಗೆ ಗಿಡವನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ಜ್ಞಾನವಿಕಾಸ ಸಮನ್ವಯಾಧಿಕಾರಿ ಕವಿತಾ ನಿರೂಪಿಸಿ, ಮೇಲ್ವಿಚಾರಕ ದಿವಾಕರ ಸ್ವಾಗತಿಸಿ, ಸೇವಾ ಪ್ರತಿನಿಧಿ ಶ್ರೀದೇವಿ ವಂದಿಸಿದರು.
Comments are closed.