ಕುಂದಾಪುರ: ಕಳೆದ ತಿಂಗಳು (ಎ.23ರಂದು) ಅಪರಾಹ್ನ ಮೂರು ಗಂಟೆಯಿಂದ ರಾತ್ರಿ 10ಗಂಟೆ ಮದ್ಯಾವಧಿಯಲ್ಲಿ ಬೈಂದೂರು ತಾಲೂಕು ಯಡ್ತರೆ ಗ್ರಾಮದ ಎಸ್‌ಬಿಐ ಬ್ಯಾಂಕ್ ಹಿಂಭಾಗದಲ್ಲಿರುವ ರಾಜಸ್ತಾನ್ ಮೂಲದ ರಾವಲ್ ಸಿಂಗ್ ಎಂಬವರು ವಾಸವಾಗಿದ್ದ ಬಾಡಿಗೆ ಮನೆಯಲ್ಲಿ ಯಾರು ಇಲ್ಲದ ಸಮಯ ಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿ ಮನೆಯೊಳಗಿನ ಗೋಡ್ರೆಜ್‌ನಲ್ಲಿರಿಸಿದ್ದ ಆರು ಲಕ್ಷ ರೂ.ಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಬೈಂದೂರು ವೃತ್ತನಿರೀಕ್ಷಕ ಶಿವಕುಮಾರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.

ಪ್ರಸ್ತುತ ಬೈಂದೂರು ಬಂಕೇಶ್ವರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ರಾಜಸ್ತಾನದ ಜೋದ್‌ಪುರ ಜಿಲ್ಲೆಯ ಸಿರಿಗ್ರಾತ್ ತಾಲೂಕಿನ ಸೇತ್ರಾವ್‌ನ ಮಹೇಂದ್ರ ಸೈನ್ (23) ಬಂಧಿತ ಆರೋಪಿ.
ಪ್ರಕರಣದ ತನಿಖೆಗಾಗಿ ಬೈಂದೂರು ಪೊಲೀಸ್ ಠಾಣೆಯ ಪಿಎಸ್ಐಗಳಾದ ಸುನೀಲ್ ಕುಮಾರ್. ಬಿ.ವೈ ಮತ್ತು ನವೀನ್ ಬೋರಕರ, ಹಾಗೂ ಸಿಬ್ಬಂದಿಗಳಾದ ಸಂತೋಷ ಕುಮಾರ ಯು, ಚಿದಾನಂದ, ಜಯರಾಮ, ಮಾಳಪ್ಪ ದೇಸಾಯಿ, ಪರಯ್ಯ ಮಠಪತಿ ಹಾಗೂ ಬೈಂದೂರು ವೃತ್ತ ಕಛೇರಿ ಸಿಬ್ಬಂದಿಗಳಾದ ಶಿವಾನಂದ ಹುದ್ದಾರ, ಅಶೋಕ ರಾಥೋಡ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಕಛೇರಿ ಸಿಡಿಆರ್ ವಿಭಾಗದ ದಿನೇಶ್ ಮೊದಲಾದವರ ವಿಶೇಷ ತಂಡವನ್ನು ರಚಿಸಿದ್ದು, ಈ ವಿಶೇಷ ತಂಡವು ದಿನಾಂಕ ಮೇ.7ರಂದು ಆರೋಪಿಗಳನ್ನು ಪತ್ತೆ ಮಾಡಿದೆ. ಆತನಿಂದ ಕಳವು ಮಾಡಿರುವ ಆರು ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.