ಕರಾವಳಿ

ಉಡುಪಿ ಸಶಸ್ತ್ರ ಮೀಸಲು ಪಡೆ (ಡಿಎಆರ್) ಎಆರ್‌ಎಸ್‌ಐ ನಾಗೇಶ್ ಎಂ. ಕ್ಯಾನ್ಸರ್‌ನಿಂದ ನಿಧನ

Pinterest LinkedIn Tumblr

ಉಡುಪಿ: ಉಡುಪಿ ಸಶಸ್ತ್ರ ಮೀಸಲು ಪಡೆ (ಡಿಎಆರ್) ಎಆರ್‌ಎಸ್‌ಐ ನಾಗೇಶ್ ಎಂ ಅವರು ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ.

ಇವರು ಕೆಲವು ಸಮಯದಿಂದ ಕ್ಯಾನ್ಸ‌ರ್ ಕಾಯಿಲೆಯಿಂದ ಬಳಲುತ್ತಿದ್ದರು. ನಾಗೇಶ್ ಅವರು ಮೂಲತಃ  ಮಂಗಳೂರು ಕಿನ್ನಿಗೋಳಿ ಪದ್ಮನೂರು ಮೂಲದವರಾಗಿದ್ದು, ಪ್ರಸ್ತುತ ಉಡುಪಿಯಲ್ಲಿ ವಾಸಿಸುತ್ತಿದ್ದಾರೆ. 1996ರಲ್ಲಿ ಮಂಗಳೂರಿನ ಡಿಎಆರ್‌ನಲ್ಲಿ ನೇಮಕಾತಿ ಹೊಂದಿದ ಬಳಿಕ, ಹೊಸದಾಗಿ ಉಡುಪಿ ಜಿಲ್ಲೆ ರಚನೆಯಾದ ಸಮಯದಲ್ಲಿ ಉಡುಪಿ ಜಿಲ್ಲೆಗೆ ವರ್ಗಾವಣೆಗೊಂಡಿದ್ದರು. ಬಳಿಕ 2016ರಂದು ಪದೋನ್ನತಿ ಹೊಂದಿ ಎಆರ್‌ಎಸ್‌ಐ ಹುದ್ದೆ ಪಡೆದಿದ್ದರು. ಇವರು ಪತ್ನಿ ಮತ್ತು ಎರಡು ಮಕ್ಕಳನ್ನು ಅಗಲಿದ್ದಾರೆ.

 

Comments are closed.