ಕರಾವಳಿ

ಉಡುಪಿ ಅಬಕಾರಿ ಡಿಸಿ ಶ್ರೀನಿವಾಸ್ ಮನೆಗೆ ಲೋಕಾಯುಕ್ತ ದಾಳಿ: 8.69 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ!

Pinterest LinkedIn Tumblr

ಉಡುಪಿ: ಆದಾಯಕ್ಕೆ ಮೀರಿ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು, ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿ (ಡಿಸಿ) ಶ್ರೀನಿವಾಸ್‌ ಟಿ.ಎಂ. ಅವರ ಮನೆ ಹಾಗೂ ಸಂಬಂಧಿತ ಸ್ಥಳಗಳ ಮೇಲೆ ದಾಳಿ ನಡೆಸಿ 8.69 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ.

ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಉಡುಪಿ ಪೊಲೀಸ್‌ ಠಾಣೆಯಲ್ಲಿ ಸರಕಾರಿ ಅಧಿಕಾರಿಯು ತಮ್ಮ ಆದಾಯದ ಮೂಲಗಳಿಗಿಂತ ಹೆಚ್ಚು ಅಕ್ರಮ ಆಸ್ತಿಯನ್ನು ಹೊಂದಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಅದರಂತೆ ಲೋಕಾಯುಕ್ತ ಪೊಲೀಸರು, ಮಾ.11ರಂದು ಆರೋಪಿ ಅಧಿಕಾರಿಗೆ ಸಂಬಂಧಿಸಿದ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು 15 ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧನಾ ಕಾರ್ಯ ನಡೆಸಿದ್ದರು.

ಈ ವೇಳೆ ಆರೋಪಿಗೆ ಸಂಬಂಧಿಸಿದ ಒಟ್ಟು 11 ನಿವೇಶನಗಳು, 6 ವಾಸದ ಮನೆಗಳು, 31 ಎಕರೆ ಕೃಷಿ ಜಮೀನು ಎಲ್ಲಾ ಸೇರಿ ಒಟ್ಟು 6,90,64,716ರೂ. ಸ್ತಿರ ಆಸ್ತಿ, 3,95,941. ನಗದು 1,47,50,506 . ಮೌಲ್ಯದ ಚಿನ್ನಾಭರಣಗಳು, 17,00,000 ರೂ. ಮೌಲ್ಯದ ವಾಹನಗಳು, 25,75,000ರೂ. ಬ್ಯಾಂಕ್ ಠೇವಣಿ, 72,68,554 ರೂ. ಮೌಲ್ಯದ ಇತರೆ ವಸ್ತುಗಳು ಎಲ್ಲಾ ಸೇರಿ ಒಟ್ಟು 2,66,90,001ರೂ. ಚರ ಆಸ್ತಿ ಕಂಡು ಬಂದಿದೆ. ಒಟ್ಟು 8,69,23,435ರೂ. ಮೌಲ್ಯದ ಅಕ್ರಮ ಆಸ್ತಿ ಕಂಡುಬಂದಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

Comments are closed.