ಉಡುಪಿ: ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಮರತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಖಾಲಿ ಜಾಗದಲ್ಲಿ ವರಾಹಿ ನದಿಯಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಇಪ್ಪತ್ತಕ್ಕೂ ಅಧಿಕ ಆರೋಪಿಗಳನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ದೇವಾನಂದ ಶೆಟ್ಟಿ ಹಳ್ನಾಡು, ಉತ್ತರ ಪ್ರದೇಶ ಮೂಲದ ಅಮರೇಶ(27), ಕೃಪಾಲ್(32), ಪರಶುರಾಮ(35), ಪ್ರಬೀನ್(20), ರಾಮಚರಣ್(35), ಸತ್ರೊಹನ್ (28), ರಾಮ ಅವತಾರ್ (21), ಬಿಮಲೇಶ್(23), ರಾಮಲಾಲ್(40), ಬೊಲಾ(23), ಸಂಜಯ (27), ಹಿರಿದೆ ರಾಮ(27), ಸರ್ವನ್(21), ಮುಖೇಶ(24), ಕರಣ್(21), ಪ್ರೀನ್ಸ್ (19), ಕಿಶುನ್(19), ಸುರಾಜ(30), ನೀರಾಜ(22), ಕಲ್ಲು(19), ರಾಜಿವ(26), ಎನ್ನುವರ ವಿರುದ್ದ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಮರತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಖಾಲಿ ಜಾಗದಲ್ಲಿ ವರಾಹಿ ನದಿಯಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಸುಮಾರು 8 ಲಕ್ಷ 50 ಸಾವಿರ ಮೌಲ್ಯದ 315 ಯುನಿಟ್ ಮರಳು, ಮರಳು ತೆಗೆಯಲು ಬಳಸಿದ 3 ಲಕ್ಷ ಮೌಲ್ಯದ ಮೂರು ಪೈಬರ್ ಬೋಟ್‌ಗಳು ಸಹಿತ ಇತರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು, ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ ಕೋಟ ಠಾಣಾ ಪಿಎಸ್ಐ ಪ್ರವೀಣ್ ಕುಮಾರ್ ಆರ್. ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದರು.
Comments are closed.