ಕರಾವಳಿ

ಕುಂದೇಶ್ವರ ದೀಪೋತ್ಸವ ಹಿನ್ನೆಲೆ: ನಾಳೆ (ನ.19) ಸಂಜೆ ನಗರದೊಳಗೆ ಸಂಚಾರಕ್ಕೆ ನಿರ್ಬಂಧ- ಪೇಟೆಯ ಹೊರವಲಯದಲ್ಲಿ ಪಾರ್ಕಿಂಗ್ ವ್ಯವಸ್ಥೆ

Pinterest LinkedIn Tumblr

ಕುಂದಾಪುರ: ಪುರಾಣ ಪ್ರಸಿದ್ಧ ಕುಂದಾಪುರದಲ್ಲಿರುವ ಶ್ರೀ ಕುಂದೇಶ್ವರ ದೇವಸ್ಥಾನದ ದೀಪೋತ್ಸವ ನ.19 ಬುಧವಾರದಂದು ನಡೆಯಲಿದ್ದು, ಸಹಸ್ರಾರು ಭಕ್ತಾದಿಗಳು ಭಾಗವಹಿಸುವ ಹಿನ್ನೆಲೆ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ ಪೊಲೀಸರು ಪ್ರಕಟಣೆ ನೀಡಿದ್ದಾರೆ.

ದೀಪೋತ್ಸವ ಹಿನ್ನಲೆಯಲ್ಲಿ ಕುಂದಾಪುರದ ಶಾಸ್ತ್ರಿ ಪಾರ್ಕ್‌ನಿಂದ ಹೊಸ ಬಸ್ ನಿಲ್ದಾಣವರೆಗೆ ಸಂಜೆ 5 ಗಂಟೆಯಿಂದ ಕುಂದಾಪುರದ ಮುಖ್ಯರಸ್ತೆಯಲ್ಲಿ ಜನ ಸಂಚಾರವಿರುವುದರಿಂದ ಕುಂದಾಪುರ ಮುಖ್ಯ ರಸ್ತೆಗೆ ಬರುವ ಎಲ್ಲಾ ಬಸ್ ಹಾಗೂ ಇತರ ವಾಹನಗಳೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಕುಂದಾಪುರ ನೆಹರು ಮೈದಾನ, ಎಪಿಎಂಸಿ ಕಚೇರಿಯ ಮುಂಭಾಗ, ಕುಂದಾಪುರ ನ್ಯಾಯಾಲಯದ ಎದುರಿನ ಜಾಗ, ಬಿ.ಬಿ. ಹೆಗ್ಡೆ ಕಾಲೇಜು ಬಳಿ ಖಾಲಿ ಜಾಗ, ಕುಂದಾಪುರ ರಿಂಗ್ ರಸ್ತೆಯ ಬಳಿಯಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.  ವಾಹನ ಸವಾರರು ತಮ್ಮ ವಾಹನವನ್ನು ಕುಂದಾಪುರ ಮುಖ್ಯ ರಸ್ತೆ ಒಳಗೆ ತರುವುದನ್ನು ಸಂಪೂರ್ಣವಾಗಿ ನಿಷೇಧಿಷಲಾಗಿದೆ. ಈ ಬಗ್ಗೆ ಸಾರ್ವಜನಿಕರು ಸಹಕರಿಸಬೇಕೆಂದು ಕುಂದಾಪುರ ನಗರ ಠಾಣೆ ಮತ್ತು ಕುಂದಾಪುರ ಸಂಚಾರ ಠಾಣೆ ಪೊಲೀಸರ ಪ್ರಕಟಣೆ ತಿಳಿಸಿದೆ.

Comments are closed.