ಕರಾವಳಿ

ನದಿಗೆ ಆಟವಾಡಲು ತೆರಳಿದ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ‌ ನೀರಿನಲ್ಲಿ ಮುಳುಗಿ ಮೃತ್ಯು

Pinterest LinkedIn Tumblr

ಉಡುಪಿ: ನದಿಗೆ ಆಟವಾಡಲು ತೆರಳಿದ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ‌ ನೀರು ಪಾಲಾಗಿದ್ದು ಒಂದು ದಿನದ ಬಳಿಕ ಆತನ ಮೃತದೇಹ ಪತ್ತೆಯಾದ ಘಟನೆ ಹಿರಿಯಡಕ ಅಲಂಗಾರು ಎಂಬಲ್ಲಿ ನಡೆದಿದೆ.

ಘಟನೆ ವಿವರ: ಹಿರಿಯಡಕ ಸರಕಾರಿ ಪ್ರೌಢ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಶ್ರೀಶಾನ್ ಶೆಟ್ಟಿ(16) ನ.9ರಂದು ಮಧ್ಯಾಹ್ನ ತನ್ನ ತಂದೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ಪೆರ್ಡೂರಿಗೆ ಹೋಗಿದ್ದು ಅಲ್ಲಿ ತಂದೆಯನ್ನು ಬಿಟ್ಟು ಅಜ್ಜಿ ಮನೆಯಾದ ಅಲಂಗಾರಿಗೆ ಹೋಗಿದ್ದು ಅಜ್ಜಿ ಮೊಬೈಲ್‌‌ನಿಂದ ತಂದೆಗೆ ಕರೆ ಮಾಡಿ ಅಜ್ಜಿ ಮನೆ ಬಳಿ ಇರುವ ನದಿಗೆ ಸಂಜೆಯಾದರೂ ಮಗ ಮನೆಗೆ ಮರಳಿ ಬಾರದ ಕಾರಣ ತಂದೆ ಆತನ ಅಜ್ಜಿಗೆ ಕರೆ ಮಾಡಿ ಕೇಳಿದ್ದು ಶ್ರೀಶಾನ್ ಮನೆಗೆ ಬಂದಿಲ್ಲವೆಂದು ತಿಳಿಸಿದ್ದರು. ಕೂಡಲೇ ಬಾಲಕನ ತಂದೆ ಅಲಂಗಾರು ಪೆರ್ಡೂರು ಹಾಗೂ ತನ್ನ ಮನೆಯ  ಸುತ್ತಮುತ್ತ ಹುಡುಕಾಡಿದ್ದು ಆತ ಪತ್ತೆಯಾಗಿಲ್ಲ.

ಬಾಲಕನಿಗಾಗಿ ಹುಡುಕಾಡಿದ್ದು ನ.10 ಸೋಮವಾರ ಪೆರ್ಡೂರು ಅಡಪಾಡಿಯ ಮಡಿಸಾಲು ಹೊಳೆಯಲ್ಲಿ ಶ್ರೀಶಾನ್ ಮೃತ ದೇಹ ಪತ್ತೆಯಾಗಿದೆ. ಈತನು ಹೊಳೆಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದು, ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.