ಉಡುಪಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುವ ರಾಜ್ಯದ ನಾಗರೀಕರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಉಡುಪಿ ಜಿಲ್ಲೆಯಲ್ಲಿ ಗಣತಿದಾರರಾಗಿ ನಿಯೋಜನೆಗೊಂಡಿರುವ ಮೂವರು ಶಿಕ್ಷಕಿಯರು ಸಮೀಕ್ಷಾ ಕಾರ್ಯ ನಡೆಸದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮೂವರನ್ನು ಅಮಾನತು ಮಾಡಿ ಆದೇಶಿಸಿದೆ.

ಒಳಕಾಡು ಸ.ಪ್ರೌ.ಶಾಲೆಯ ಶಿಕ್ಷಕಿಯರಾದ ಸುರೇಖಾ, ರತ್ನಾ ಹಾಗೂ ಉದ್ಯಾವರ ಸ.ಪ.ಪೂ.ಕಾಲೇಜು ಸಹ ಶಿಕ್ಷಕಿ ಪ್ರಭಾ ಬಿ. ಅವರು ನೇಮಕಾತಿ ಆದೇಶವನ್ನು ಸ್ವೀಕರಿಸಿರುವುದಿಲ್ಲ ಮತ್ತು ದೂರವಾಣಿ ಮೂಲಕ ಸಂಪರ್ಕಿಸಿದರೂ ಆದೇಶ ಪ್ರತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಈ ಬಗ್ಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದರೂ ಈವರೆಗೂ ನೋಟಿಸ್ಗೆ ಸಮಜಾಯಿಷಿ ನೀಡಿಲ್ಲವಾದ್ದರಿಂದ ಮೂವರನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟನೆ ತಿಳಿಸಿದೆ.
ಸಮೀಕ್ಷೆ ಕಾರ್ಯದಲ್ಲಿ ಸಮೀಕ್ಷೆದಾರರು ನಿರ್ಲಕ್ಷತನ ತೋರಿದರೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದವರು ಸೂಚನೆ ನೀಡಿದ್ದಾರೆ.
Comments are closed.