ಕುಂದಾಪುರ: ಕಾಂತಾರ ಚಾಪ್ಟರ್1 ಚಿತ್ರದಲ್ಲಿ ನಟಿಸಿರುವ ಬಾಲಪ್ರತಿಭೆ ಸಮೀಕ್ಷಾ ಹಕ್ಲಾಡಿಯವರಿಗೆ ಕೋಟೇಶ್ವರದ ಭಾರತ್ ಸಿನೆಮಾಸ್ನಲ್ಲಿ ಕಾಂತಾರ ಚಲನಚಿತ್ರ ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು.

ವಕೀಲರಾದ ಟಿ. ಮಂಜುನಾಥ್ ಗಿಳಿಯಾರು ಸನ್ಮಾನಿಸಿ ಮಾತನಾಡಿ, ಬಹುಮುಖ ಬಾಲಪ್ರತಿಭೆಯಾಗಿರುವ ಸಮೀಕ್ಷಾ ಸರಕಾರಿ ಶಾಲೆಯ ವಿದ್ಯಾರ್ಥಿನಿ. ಸಂಗೀತ, ಭರತನಾಟ್ಯದಲ್ಲೂ ಮಿಂಚಿದ್ದಾರೆ. ಕಾಂತಾರದಲ್ಲಿ ಉತ್ತಮಪಾತ್ರ ನಿರ್ವಹಿಸಿದ್ದಾರೆಂದರು.
ಸನ್ಮಾನ ಸ್ವೀಕರಿಸಿದ ಸಮೀಕ್ಷಾ ಮಾತನಾಡಿ, ಹೊಂಬಾಳೆ ಫಿಲ್ಮ್ಸ್ ರಿಷಬ್ ಶೆಟ್ಟಿ ಸರ್, ಪ್ರಗತಿ ಮೇಡಮ್ ಹಾಗೂ ಚಿತ್ರತಂಡದ ಸಂಪೂರ್ಣ ಸಹಕಾರವಿತ್ತು. ಮನೆಯವರೂ ಕೂಡ ಪ್ರೋತ್ಸಾಹ ನೀಡಿದ್ದರು ಎಂದರು.
ದಸಂಸ ಮುಖಂಡರಾದ ಶ್ಯಾಮಸುಂದರ್ ತೆಕ್ಕಟ್ಟೆ, ರಾಜು ಕೆ.ಸಿ ಬೆಟ್ಟಿನಮನೆ, ಕುಮಾರ್ ಕೋಟ, ಸಮೀಕ್ಷಾ ಅವರ ಪೋಷಕರಾದ ಸುರೇಶ್ ಹಕ್ಲಾಡಿ, ಗೀತಾ, ಚಿತ್ರಾಭಿಮಾನಿಗಳು ಈ ವೇಳೆ ಇದ್ದರು.
Comments are closed.