ಕರಾವಳಿ

ಬೈಂದೂರು: ಮದ್ಯವ್ಯಸನಿ ಗೆಳೆಯರಿಬ್ಬರ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯ!

Pinterest LinkedIn Tumblr

ಉಡುಪಿ: ಮದ್ಯವ್ಯಸನಿಗಳಾದ ಗೆಳೆಯರಿಬ್ಬರ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ತಾಲೂಕಿನ ಯಡ್ತರೆ ಗ್ರಾಮದ ಕೊಸಳ್ಳಿ ಸಮೀಪದ ದೇವರಗದ್ದೆ ಎಂಬಲ್ಲಿ ನಡೆದಿದೆ.

ಕೇರಳ ಮೂಲದ ಬಿನೋ ಪಿಲಿಪ್ (45) ಕೊಲೆಯಾದ ಕಾರ್ಮಿಕ. ಉದಯ್ ಎಂಬಾತ ಕೊಲೆ ಆರೋಪಿ.

ತೂದಳ್ಳಿ ದೇವರಗದ್ದೆ ನಿವಾಸಿ ಥೋಮಸ್ ಎನ್ನುವವರ ತೋಟದಲ್ಲಿ ಕೇರಳ ಮೂಲದ ಬಿನು ಹಾಗೂ ಉದಯ್ ಎನ್ನುವವರು‌ ಕಳೆದ ಎರಡು ವರ್ಷದಿಂದ ರಬ್ಬ‌ರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು. ಮದ್ಯಪಾನ‌ ಮಾಡಿದಾಗ ಆಗ್ಗಾಗೆ ಗಲಾಟೆ ಮಾಡಿಕೊಳ್ಳುತ್ತಿದ್ದರು. ಶನಿವಾರ ತಡರಾತ್ರಿ ಇಬ್ಬರ ನಡುವೆ ಗಲಾಟೆ ನಡೆದಿದ್ದು ಉದಯ್ ರಬ್ಬರ್ ಟ್ಯಾಪಿಂಗ್ ಚೂರಿಯಿಂದ ಬಿನುಗೆ ಇರಿದಿದ್ದು ಗಂಭೀರ ಗಾಯಗೊಂಡ ಈತ ಸ್ಥಳದಲ್ಲೆ ಮೃತಪಟ್ಟಿದ್ದಾನೆ.

ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಮತ್ತು ಬೈಂದೂರು ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಾಗಿದೆ.

Comments are closed.