ಕುಂದಾಪುರ: ಜಮೀಯ್ಯತುಲ್ ಫಲಾಹ್ ಕುಂದಾಪುರ ತಾಲೂಕು ಘಟಕದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಕುಂದಾಪುರ ಜಾಮಿಯಾ ಮಸೀದಿಯ ಕಟ್ಟಡದಲ್ಲಿರುವ ಕಚೇರಿಯಲ್ಲಿ ನಡೆಯಿತು.

(ನೂತನ ಅಧ್ಯಕ್ಷ ಅಬು ಮೊಹಮ್ಮದ್ ಮುಜಾವರ್, ಕಾರ್ಯದರ್ಶಿ ಅಬ್ದುಲ್ ಸಲಾಂ ಚಿತ್ತೂರು, ಕೋಶಾಧಿಕಾರಿ ಜಿ. ಪಿ ಮೊಹಮ್ಮದ್ ಗುಲ್ವಾಡಿ)
ಕಾರ್ಯದರ್ಶಿಯವರು ವರದಿ ಮಂಡಿಸಿದರು. ಲೆಕ್ಕಪತ್ರವನ್ನು ಮಂಡಿಸಿ ಅನುಮೋದಿಸಲಾಯಿತು. 2025 – 27ನೇ ಸಾಲಿಗೆ ನೂತನ ಸಮಿತಿ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಅಬು ಮೊಹಮ್ಮದ್ ಮುಜಾವರ್, ಕಾರ್ಯದರ್ಶಿಯಾಗಿ ಅಬ್ದುಲ್ ಸಲಾಂ ಚಿತ್ತೂರು, ಕೋಶಾಧಿಕಾರಿಯಾಗಿ ಜಿ. ಪಿ ಮೊಹಮ್ಮದ್ ಗುಲ್ವಾಡಿ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಗಂಗೊಳ್ಳಿ ಹಾಗೂ ಹಂಝ ಹೆಮ್ಮಾಡಿ, ಜೊತೆ ಕಾರ್ಯದರ್ಶಿಯಾಗಿ ಅಯೂಬ್ ಮಾಣಿಕೊಳಲು, ಸಂಘಟನಾ ಕಾರ್ಯದರ್ಶಿಯಾಗಿ ರಿಯಾಜ್ ಕೋಡಿ, ಪತ್ರಿಕಾ ಕಾರ್ಯದರ್ಶಿಯಾಗಿ ಸಯ್ಯದ್ ನಾಸೀರ್ ಕುಂದಾಪುರ ಇವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು. ಒಟ್ಟು 21 ಜನ ಸದಸ್ಯರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
ಕೇಂದ್ರ ಸಮಿತಿಯ ವೀಕ್ಷಕರಾಗಿ ಬ್ರಹ್ಮಾವರ ಘಟಕದ ಪ್ರತಿನಿಧಿ ಅಸ್ಲಾಂ ಹೈಕಾಡಿ ಹಾಗೂ ಬೈಂದೂರು ಘಟಕದ ಫಯಾಜ್ ಅಲಿ ಉಪಸ್ಥಿತರಿದ್ದು ಚುನಾವಣಾ ಪ್ರಕ್ರಿಯೆ ನಿರ್ವಹಿಸಿದರು. ಫಜಲ್ ಮೌಲಾನ ಕಿರಾಅತ್ ಪಠಿಸಿದರು. ಅಬ್ದುಲ್ ಸಲಾಂ ಚಿತ್ತೂರು ಸ್ವಾಗತಿಸಿ,
ಮುಜಾವರ್ ಅಬು ಮಹಮ್ಮದ್ ವಂದಿಸಿದರು.
Comments are closed.