ಕರಾವಳಿ

ಮಂಗಳೂರು: ದೇವಾಡಿಗ ಯುವ ಪ್ರತಿಭಾ ಪ್ರಶಸ್ತಿಗೆ ಅರ್ಜಿ ಆಹ್ವಾನ

Pinterest LinkedIn Tumblr

ಮಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದೇವಾಡಿಗ ಸಮಾಜದ ಯುವ‌ಸಮುದಾಯಕ್ಕೆ ನೀಡುವ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಡಾ| ಕೆ.ವಿ. ದೇವಾಡಿಗ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಆಶ್ರಯದಲ್ಲಿ 2025ನೇ ಸಾಲಿನ ಈ ಪ್ರಶಸ್ತಿಗಳನ್ನು ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಡಾ| ಕೆ.ವಿ. ದೇವಾಡಿಗ ಶ್ರೇಷ್ಠ ವೈದ್ಯಕೀಯ ಪದವಿ ವಿದ್ಯಾರ್ಥಿ, ಡಾ| ಕೆ.ವಿ. ದೇವಾಡಿಗ ಶ್ರೇಷ್ಠ ಸ್ನಾತಕೋತ್ತರ ಪದವಿ ವಿದ್ಯಾರ್ಥಿ (ವೈದ್ಯಕೀಯ ಮತ್ತು ತಾಂತ್ರಿಕ ಪದವಿ ಹೊರತು), ಹರೀಶ್ ಶೇರಿಗಾರ್ ಅತ್ಯುತ್ತಮ ಯುವ ಉದ್ಯಮಿ, ಹರೀಶ್ ಶೇರಿಗಾರ್ ಶ್ರೇಷ್ಠ ಯುವ ಸಂಗೀತಗಾರ, ಡಾ। ಭಾವನಾ ಶೇರಿಗಾರ್ ಶ್ರೇಷ್ಠ ಎಂಜಿನಿಯರಿಂಗ್ ಪದವಿ ವಿದ್ಯಾರ್ಥಿ, ಡಾ। ಭಾವನಾ ಶೇರಿಗಾರ್ ಶ್ರೇಷ್ಠ ಕಾಲೇಜು ಉಪನ್ಯಾಸಕ, ಡಾ| ದಿವಾಕರ್ ರಾವ್ ಶ್ರೇಷ್ಠ ಯುವ ಪರಿಣಿತ/ ಕೌಶಲ ವ್ಯಕ್ತಿ, ಕೆ.ಜೆ. ದೇವಾಡಿಗ ಶ್ರೇಷ್ಠ ಯುವ ಕ್ರೀಡಾಪಟು, ಅಶೋಕ್‌ ಶ್ರೇಷ್ಠ ಸಮಾಜ ಸೇವೆ, ಡಾ| ದೇವರಾಜ್ ಕೆ. ಶ್ರೇಷ್ಠ ಶಿಕ್ಷಕ, ದಿ| ಕೆ. ಲಕ್ಷ್ಮಣ್ ಸ್ಮರಣಾರ್ಥ ಮಂಗಳ ಶಾಲೆಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ತೇರ್ಗಡೆಯಾದ ಶ್ರೇಷ್ಠ ವಿದ್ಯಾರ್ಥಿ ಪ್ರಶಸ್ತಿ ನೀಡಲಾಗುತ್ತಿದೆ. ರಾಜ್ಯದಲ್ಲಿ ನೆಲೆಸಿರುವ 40 ವರ್ಷದೊಳಗಿನ ದೇವಾಡಿಗ ಸಮಾಜ ಬಾಂಧವರು ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು.

ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಈ ವರೆಗೆ ಪಡೆದಿರುವ ಪ್ರಶಸ್ತಿಗಳ ಪೂರ್ಣ ವಿವರಣೆ ದಾಖಲೆಗಳೊಂದಿಗೆ ವಿಳಾಸ, ದೂರವಾಣಿ ಸಂಖ್ಯೆ, ಆಧಾರ್ ಕಾರ್ಡ್ ಪ್ರತಿಯ ಜತೆಗೆ ಜು. 31ರಂದು ಸಂಜೆ 5 ಗಂಟೆಯೊಳಗೆ ಅಧ್ಯಕ್ಷರು/ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ದೇವಾಡಿಗರ ಸಂಘ, ಸಮಾಜ ಭವನ, ಮಣ್ಣಗುಡ್ಡೆ ಮಂಗಳೂರು, ಈ ವಿಳಾಸಕ್ಕೆ ಕಳುಹಿಸಿಕೊಡಬೇಕು.

ಇಮೇಲ್ ವಿಳಾಸ: krdevadigarasangha@gmail.com ಗೆ ಕಳಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Comments are closed.