ಕರಾವಳಿ

ಕೊರಗ ಸಮುದಾಯದವರಿಗಾಗಿ ನಿರ್ಮಿಸುತ್ತಿರುವ 8 ನೂತನ ಮನೆಗಳ ಕಾಮಗಾರಿ ಪರಿಶೀಲಿಸಿದ ಕುಂದಾಪುರ ಶಾಸಕ ಎ. ಕಿರಣ್ ಕೊಡ್ಗಿ

Pinterest LinkedIn Tumblr

ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಟತಟ್ಟು ಗ್ರಾಮ ಪಂಚಾಯತಿನ ಚಿಟ್ಟಿಬೆಟ್ಟು ಪರಿಸರದಲ್ಲಿ ಪರಿಶಿಷ್ಟ ಪಂಗಡದ 8 ಹೊಸ ಮನೆ ನಿರ್ಮಾಣದ ಕಾಮಗಾರಿಯನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಪರಿಶೀಲನೆ ನಡೆಸಿದರು.

ನಿರ್ಮಾಣ ಹಂತದಲ್ಲಿರುವ ಮನೆಗಳನ್ನು ವೀಕ್ಷಿಸಿ ಮಾತನಾಡಿದ ಅವರು, ಕೊರಗ ಸಮುದಾಯದವರು ಅತ್ಯಂತ ಮುಗ್ಧ ಜನಾಂಗದವರು. ಒಂದು ಒಳ್ಳೆಯ ಉದ್ದೇಶ ಇಟ್ಟುಕೊಂಡು ಕೋಟತಟ್ಟು ಗ್ರಾಮ ಪಂಚಾಯಿತಿನ ಮುತುವರ್ಜಿಯಿಂದ ಕರ್ಣಾಟಕ ಬ್ಯಾಂಕಿನವರ ಸಹಕಾರದೊಂದಿಗೆ ಹಾಗೂ ಈ ಭಾಗದ ದಾನಿಗಳ ಮೂಲಕ ಒಂದು ಉತ್ತಮ ಸೌಲಭ್ಯವುಳ್ಳ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯತಿನವರಿಗೂ ಕರ್ಣಾಟಕ ಬ್ಯಾಂಕಿನವರೆಗೂ, ದಾನಿಗಳಿಗೆ ಕ್ಷೇತ್ರದ ಶಾಸಕರು ಕೃತಜ್ಞತೆ ಸಲ್ಲಿಸಿದರ. ಫಲಾನುಭವಿಗಳಿಗೆ  ಕರ್ಣಾಟಕ ಬ್ಯಾಂಕ್ ನವರು ನೀಡಿದ ಚೆಕ್ ವಿತರಣೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಗೀತಾನಂದ ಫೌಂಡೇಶನ್ ಕೋಟ ಇದರ ಪ್ರವರ್ತಕರಾದ ಆನಂದ ಸಿ.ಕುಂದರ್, ಉಡುಪಿ ಜಿಲ್ಲಾ ಕರ್ನಾಟಕ ಬ್ಯಾಂಕ್ ಅಸಿಸ್ಟೆಂಟ್ ಮೆನೇಜರ್ ವಾದಿರಾಜ್ ಭಟ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ, ಉಪಾಧ್ಯಕ್ಷೆ ಸರಸ್ವತಿ, ಕೊರಗ ಸಮುದಾಯದ ಮುಖಂಡ ಗಣೇಶ್ ಹಾಗೂ ಗ್ರಾಮ ಪಂಚಾಯಿತಿನ ಸದಸ್ಯರು ಮತ್ತು ಗ್ರಾಮಸ್ಥರು, ಹಾಗೂ ಕೊರಗ  ಕಾಲನಿಯ ನಿವಾಸಿಗಳು ಉಪಸ್ಥಿತರಿದ್ದರು.

Comments are closed.