ಕರಾವಳಿ

ತ್ರಾಸಿ: ನಿಲ್ದಾಣದಲ್ಲೇ ಖಾಸಗಿ-ಸರಕಾರಿ ಬಸ್ ನಿಲ್ಲಿಸಲು ಸೂಚನಾ ಫಲಕ ಅಳವಡಿಸಿದ ಗಂಗೊಳ್ಳಿ ಪೊಲೀಸರು

Pinterest LinkedIn Tumblr

ಕುಂದಾಪುರ: ವಾಹನ ದಟ್ಟಣೆ ಜಾಸ್ಥಿಯಿರುವ ತ್ರಾಸಿ ಜಂಕ್ಷನ್ ತಿರುವು ಪ್ರದೇಶದಲ್ಲಿ ಬಸ್‌ಗಳನ್ನು ನಿಲುಗಡೆ ಮಾಡುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆ ಗಂಗೊಳ್ಳಿ ಠಾಣೆ ಪೊಲೀಸರು ಸೂಚನಾ ಫಲಕ ಅಳವಡಿಸಿ ಬಸ್ ಚಾಲಕರಿಗೆ ಮಾಹಿತಿ ನೀಡಿದ್ದಾರೆ.

ಇಲ್ಲಿನ ತ್ರಾಸಿ ಪ್ರದೇಶವು ರಾಷ್ಟ್ರೀಯ ಹೆದ್ದಾರಿ ಸಹಿತ ಮತ್ತೆರಡು ರಸ್ತೆಗಳು ಕೂಡುವ ಜಂಕ್ಷನ್ ಆಗಿದ್ದು ವಾಹನಗಳು ಅತಿಯಾದ ಸಂಖ್ಯೆಯಲ್ಲಿ ಸಂಚರಿಸುತ್ತದೆ. ಹಾಗೆಯೇ ಪ್ರಮುಖ ರಸ್ತೆಯಿಂದ ರಾ.ಹೆದ್ದಾರಿಗೆ-ಹೆದ್ದಾರಿಯಿಂದ ಪ್ರಮುಖ ರಸ್ತೆಗೆ ವಾಹನಗಳು ತಿರುವು ಪಡೆಯಬೇಕಿರುತ್ತದೆ. ಈ‌ ಸಮಯದಲ್ಲಿ ಸರಕಾರಿ ಹಾಗೂ ಖಾಸಗಿ ಬಸ್ಸಿನವರು ರಸ್ತೆಗೆ ಅಡ್ಡಲಾಗಿ ಬಸ್ ನಿಲುಗಡೆ ಮಾಡುವ ಕಾರಣ ಆಟೋ ರಿಕ್ಷಾ, ಲಘುವಾಹನಗಳ ಸಹಿತ ಇತರೆ ಎಲ್ಲಾ ವಾಹನ ಸವಾರರಿಗೆ ತಿರುವು ಪಡೆಯಲು ಸಮಸ್ಯೆಯಾಗುತ್ತಿದೆ. ಅಂತೆಯೇ ಹೆದ್ದಾರಿಯಲ್ಲೂ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ.

ಈ ಹಿನ್ನೆಲೆ ಗಂಗೊಳ್ಳಿ ಠಾಣೆ ಪೊಲೀಸ್ ಉಪನಿರೀಕ್ಷಕ ಪವನ್ ನಾಯಕ್ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಸೂಚನಾ ಫಲಕ‌ ಅಳವಡಿಸಿದ್ದು ತ್ರಾಸಿ ಜಂಕ್ಷನ್‌ನಲ್ಲಿ ಬಸ್ ನಿಲುಗಡೆ ಮಾಡದೆ ಬಸ್ ನಿಲ್ದಾಣದಲ್ಲಿ ಬಸ್ ನಿಲ್ದಾಣದಲ್ಲೆ ನಿಲ್ಲಿಸಬೇಕು. ಇಲ್ಲವಾದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Comments are closed.