ಕುಂದಾಪುರ: ಹಿಲಿಯಾಣ ಗ್ರಾಮದ ಹೊಸಮಠ ಎಂಬಲ್ಲಿ ರೇಖಾ ಪೂಜಾರಿ ಎನ್ನುವರ ಮೇಲೆ ಪತಿಯಿಂದ ಆದ ಮಾರಣಾಂತಿಕ ಹಲ್ಲೆಯಿಂದ ರೇಖಾ ಮೃತರಾಗಿದ್ದರು. ಇವರ ಇಬ್ಬರು ಗಂಡು ಮಕ್ಕಳ ಭವಿಷ್ಯದ ಬಗ್ಗೆ ನಿಲುವು ತೆಗೆದುಕೊಳ್ಳಲು ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘ, ಬಿಲ್ಲವ ಸಂಘ ಕೊಕ್ಕರ್ಣೆ, ಬಿಲ್ಲವ ಸಂಘ ಬೆಳ್ವೆ ಇದರ ಪದಾಧಿಕಾರಿಗಳು, ಸದಸ್ಯರು ಭೇಟಿ ನೀಡಿ ಚರ್ಚಿಸಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಮೃತರ ಮರಾಣಾನಂತರದ ಅಪರ ಕ್ರಿಯೆಯ ಖರ್ಚಿಗಾಗಿ ತುರ್ತು ಸಹಾಯ ನೀಡಲಾಯಿತು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಜಂಟಿಖಾತೆಯನ್ನು ತೆರೆದು ಅದಕ್ಕೆ ಮೂರು ಬಿಲ್ಲವ ಸಂಘಗಳು ಮತ್ತು ಇತರ ದಾನಿಗಳಿಂದ ಹಣವನ್ನು ಜಮೆ ಮಾಡಿ ಮಕ್ಕಳ ಸುಸೂತ್ರವಾದ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿ ಕೊಡುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಬಿಲ್ಲವ ಸಮಾಜ ಸೇವಾ ಸಂಘ ರಿ. ಕುಂದಾಪುರ ಇದರ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ, ಪ್ರಧಾನ ಕಾರ್ಯದರ್ಶಿ ಯೋಗೇಶ್ ಪೂಜಾರಿ ಕೋಡಿ, ಕೋಶಾಧಿಕಾರಿ ವಿನಯ್ ಪೂಜಾರಿ ಬನ್ನಾಡಿ, ಕಾರ್ಯಕಾರಿ ಮಂಡಳಿ ಸದಸ್ಯರಾದ ಬಸವರಾಜ್ ಹೋದ್ರೋಳಿ, ಬೆಳ್ವೆ ಬಿಲ್ಲವ ಸಂಘದ ಪ್ರಮುಖರಾದ ಉದಯ್ ಪೂಜಾರಿ ಬೆಳ್ವೆ, ಕಾರ್ಯದರ್ಶಿ ಉದಯ್ ಪೂಜಾರಿ, ಮದನ್ ಪೂಜಾರಿ, ಕೊಕ್ಕರ್ಣೆ ಬಿಲ್ಲವ ಸಂಘದ ಪ್ರಮುಖರಾದ ಸಂಜೀವ್ ಮಾಸ್ಟರ್, ಶಂಕರ ಪೂಜಾರಿ ಆವರ್ಸೆ, ಹಾಗೂ ಇತರ ಸದಸ್ಯರು ಹಾಜರಿದ್ದರು.
Comments are closed.