ಕುಂದಾಪುರ: ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಾ ಮಂಗಳೂರು, ಪುತ್ತೂರು ಭಾಗದಲ್ಲಿ ಶಾಖೆಗಳನ್ನು ಹೊಂದಿರುವ ಅಮರ್ ಜ್ಯೋತಿ ಆಟೋಮೊಬೈಲ್ಸ್ ಸಂಸ್ಥೆಯಿಂದ ಎಸ್ಎಂಎಲ್ ಇಸುಜು(SML ISUZU)ಲಿಮಿಟೆಡ್ ಇದರ 3ನೇ ಶೋರೂಂ ಉಡುಪಿ ಜಿಲ್ಲೆಯ ಕುಂದಾಪುರದ ತೆಕ್ಕಟ್ಟೆಯಲ್ಲಿ ಶುಭಾರಂಭಗೊಂಡಿದೆ.

ಅಮರ್ ಜ್ಯೋತಿ ಆಟೋಮೊಬೈಲ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಅನೀಶ್ ಕೊರೆಯಾ ಅವರ ತಂದೆ-ತಾಯಿ ಮ್ಯಾಕ್ಸಿಮ್ ಮತ್ತು ಅನಿತಾ ಕೊರೆಯಾ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು.
ಆಶೀರ್ವಚನವನ್ನು ಫಾದರ್ ಮುಲ್ಲರ್ ಚಾರಿಟೇಬಲ್ ಟ್ರಸ್ಟ್ ನ ಆಡಳಿತಾಧಿಕಾರಿ ಅತೀ ವಂದನೀಯ ಅಜಿತ್ ಮಿನೇಜಸ್ ನೆರವೇರಿಸಿ ಮಾತನಾಡಿ, ಜೀವನದಲ್ಲಿ ನಾವು ದೊಡ್ಡ ಕನಸುಗಳನ್ನು ಕಾಣಬೇಕು. ಕನಸುಗಳು ಸಾಕಾರಗೊಳ್ಳಲು ಧೈರ್ಯ ಮತ್ತು ಬದ್ದತೆ ಇದ್ದರೆ ಮಾತ್ರ ಸಾಧ್ಯ. ಉದ್ಯಮವನ್ನು ಮುನ್ನೆಡಸಲು ಛಲ, ವಿಶ್ವಾಸ ಅತ್ಯಗತ್ಯ. ಅನೀಶ್ ಮತ್ತು ತಂಡ ಉದ್ಯಮದಲ್ಲಿ ಉತ್ತಮ ಯಶಸ್ಸು ಕಾಣುತ್ತಿದ್ದಾರೆ ಅದಕ್ಕೆ ಸಾಕ್ಷಿ ತೆಕ್ಕಟ್ಟೆಯ ಮೂರನೇ ಸಂಸ್ಥೆ ಎಂದರು. ಎಸ್ಎಂಎಲ್ ಇಸುಜು(SML ISUZU) ಸಂಸ್ಥೆಯವರು ಉತ್ತಮ ಸಹಕಾರ ನೀಡುತ್ತಾ ಬಂದಿದ್ದಾರೆ. ಮುಂದಿನ ದಿನಗಳಲ್ಲಿಯೂ ಸಹ ಅವರ ಸಹಕಾರ ಈ ಸಂಸ್ಥೆಗೆ ಇರಲಿ ಎಂದು ಶುಭಹಾರೈಸಿದರು.
ಅಮರ್ ಜ್ಯೋತಿ ಆಟೋಮೊಬೈಲ್ಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ಅನೀಶ್ ಕೊರೆಯಾ ಮಾತನಾಡಿ, 2019ರಲ್ಲಿ ಮಂಗಳೂರಿನ ಪಡೀಲ್ನಲ್ಲಿ ಪ್ರಾರಂಭವಾದ ಅಮರ್ ಜ್ಯೋತಿ ಆಟೋಮೊಬೈಲ್ಸ್ ಸಂಸ್ಥೆ ಇದೀಗ ಪುತ್ತೂರು ಮತ್ತು ಕುಂದಾಪುರದಲ್ಲಿ ಶಾಖೆ ಹೊಂದಿದೆ. ಅತೀ ಶ್ರೀಘ್ರದಲ್ಲಿ ಚಿಕ್ಕಮಗಳೂರಿಗೆ ವಿಸ್ತರಣೆಗೊಳ್ಳಳಲಿದೆ ಎಂದರು. ಪ್ರಸ್ತುತ 90 ಸಿಬ್ಬಂದಿಗಳು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆನ್ನೆಲುಬಾಗಿ ನಿಂತು ಸಹಕಾರ ನೀಡಿದ ಗ್ರಾಹಕರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಎಸ್ಎಂಎಲ್ ಇಸುಜು ಝೋನಲ್ ಬಿಸಿನೆಸ್ ಹೆಡ್ ವಿ. ನೀಲಕಂಠನ್, ಸೀನಿಯರ್ ಮಾರ್ಕೆಟಿಂಗ್ ಮ್ಯಾನೆಜರ್ ಪ್ರಸನ್ನ ಪಾಟೀಲ್, ಡೆಪ್ಯುಟಿ ಮ್ಯಾನೇಜರ್ ಆಫ್ ಸರ್ವಿಸ್ ಲೋಕೇಶ್, ಡೆಪ್ಯುಟಿ ಮ್ಯಾನೆಜರ್ ಆಫ್ ಮಾರ್ಕೆಟಿಂಗ್ ವಿಲಾಸ್, ಅಮರ್ ಜ್ಯೋತಿ ಆಟೋಮೊಬೈಲ್ಸ್ ಪ್ರಧಾನ ವ್ಯವಸ್ಥಾಪಕ ರೇನ್ಸನ್ ಮಚಾಡೊ, ಸಂಸ್ಥೆಯ ಸೇವಾ ವ್ಯವಸ್ಥಾಪಕ ನೆಲ್ಸನ್, ಸೇಲ್ಸ್ ಮ್ಯಾನೇಜರ್ ಅಚಲ್, ಕುಂದಾಪುರ ಶಾಖಾ ವ್ಯವಸ್ಥಾಪಕ ಅರವಿಂದ್ ಉಪಸ್ಥಿತರಿದ್ದರು.
ಆರ್ಜೆ ಅನುರಾಗ್ ಕಾರ್ಯಕ್ರಮ ನಿರೂಪಿಸಿದರು.
Comments are closed.