ದುಬೈ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಒಗ್ಗೂಡಿ ಕಳೆದ ಇಪ್ಪತೈದು ವರ್ಷಗಳ ಹಿಂದೆ ಸ್ಥಾಪನೆ ಮಾಡಿರುವ ವಿವಿಧ ಜಾತಿ ಸಮುದಾಯದ ಸಂಘಟನೆಗಳ ಪ್ರತಿನಿಧಿಗಳು ಒಟ್ಟು ಸೇರಿ ರಚಿಸಿಕೊಂಡಿರುವ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಅತ್ಯಂತ ಶ್ರದ್ಧಾ ಭಕ್ತಿ ಭಾವದೋದಿಗೆ ಆಚರಿಸಿಕೊಂಡು ಬರುತ್ತಿದ್ದಾರೆ.
ಈ ಬಾರಿ 2025 ಜೂನ್ 1ನೇ ತಾರೀಕಿನಂದು ದುಬಾಯಿ ಅಲ್ ಸಫಾದಲ್ಲಿರುವ ಜೆ. ಎಸ್. ಎಸ್. ಪ್ರವೈಟ್ ಸ್ಕೂಲ್ ಸಭಾಂಗಣದಲ್ಲಿ ಸಂಜೆ 4.00 ಗಂಟೆಯಿAದ ಸಂಕಲ್ಪದೊಂದಿಗೆ ಶ್ರೀ ರಘು ಭಟ್ ಪೌರೊಹಿತ್ಯದಲ್ಲಿ ನಡೆಯಿತು. ಸಾರ್ವಜನಿಕರ ಪರವಾಗಿ ಶ್ರೀ ರಮಾನಂದ್ ಶೆಟ್ಟಿ ಶ್ರೀಮತಿ ಆಶಾ ರಮಾನಂದ್ ಶೆಟ್ಟಿ ದಂಪತಿ ಹಾಗೂ ಕಾರ್ಯಕಾರಿ ಸಮಿತಿಯ ಪರವಾಗಿ ಶ್ರೀ ವಿಶ್ವನಾಥ್ ಶೆಟ್ಟಿ ಶ್ರೀಮತಿ ಉಷಾ ವಿಶ್ವನಾಥ್ ಶೆಟ್ಟಿ ಪೂಜೆಯಲ್ಲಿ ಕುಳಿತು ಪೂಜ ಕೈಂಕರ್ಯವನ್ನು ನಡೆಸಿಕೊಟ್ಟರು.ಹೆಚ್ಚಿನ ಸಂಖೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು.
ಮೊಗವೀರ್ಸ್ ಭಜನಾ ಮಂಡಳಿ ದುಬಾಯಿ ಮತ್ತು ಶ್ರೀ ರಾಜರಾಜೇಶ್ವರಿ ಭಜನಾ ತಂಡಾ ದುಬಾಯಿ ಇವರ ವತಿಯಿಂದ ಭಕ್ತಿ ಸಂಗೀತ ಕಾರ್ಯಕ್ರಮ ನೆರವೇರಿತು. ಮೊಗವೀರ್ಸ್ ದುಬಾಯಿ ತಂಡ, ಬ್ರಾಹ್ಮಣ ಸಮಾಜ ತಂಡ ಜಸ್ಮಿತಾ ನೃತ್ಯ ತಂಡ ದವರಿಂದ ಭಜನಾ ನೃತ್ಯ, ಸಾಮೂಹಿಕವಾಗಿ ಹನುಮಾನ್ ಚಾಲಿಸಾ ಪಠಣದ ನಂತರ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಿತು.
ಭಾರತದಿಂದ ಬಂದಿರುವ, ಅಯೋಧ್ಯೆಯ ಶ್ರೀರಾಮ ಲಲ್ಲನ ಮೂರ್ತಿಯನ್ನು ಕೆತ್ತಿರುವ ಶಿಲ್ಪಿಗಳಲ್ಲಿ ಓರ್ವರಾದ ಶಿಲ್ಪಿ ಗಣೇಶ್ ಭಟ್ ದಂಪತಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸಾಮೂಹಿಕ ಶ್ರೀ ಸತ್ಯನಾರಾಯಣ ಸಮಿತಿಯಯ ತಂಡದವರ ಜೊತೆಗೆ ಶ್ರೀ ವರಮಹಾ ಲಕ್ಷ್ಮೀ ಸೇವಾ ಸಮಿತಿ, ಬಿರುವೆರ್ ಕುಡ್ಲ ಗಾಣಿಗ ಸಮಾಜ ಹಾಗೂ ಇನ್ನಿತರ ಸಮಾಜದ ಸದಸ್ಯರುಗಳು ಪೂಜಾ ಕಾರ್ಯದಲ್ಲಿ ಬೆಂಬಲ ನೀಡಿದ್ದರು. ಪೂಜೆಯ ವಿವಿಧ ಸೇವೆಗಳನ್ನು ಮಾಡಿಸುವ ಜವಬ್ಧಾರಿಯನ್ನು ಮತ್ತು ಭಜನಾ ತಂಡ, ಪೂಜಾ ಮಂಟಪದ ಅಲಂಕಾರ ಮಾಡಿರುವ ಶ್ರೀ ರಾಜೇಶ್ ಕುತ್ತಾರ್ ಮತ್ತು ತಂಡದವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
Comments are closed.