ಕರಾವಳಿ

ಉಡುಪಿ ಜಿಲ್ಲೆಯ ಎಸ್ಪಿಯಾಗಿ ಹರಿರಾಂ ಶಂಕರ್ ಅಧಿಕಾರ ಸ್ವೀಕಾರ‌ | ನನ್ನ ನಂಬರ್ 24*7 ಚಾಲ್ತಿಯಲ್ಲಿರುತ್ತೆ, ಯಾವುದೇ ಮಾಹಿತಿಯಿದ್ರೂ‌ ಹಂಚಿಕೊಳ್ಳಿ: ಎಸ್ಪಿ

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಕದಡಬಾರದು. ಅಕ್ರಮ ಚಟುವಟಿಕೆಗಳಿಗೆ ಅವಕಾಶವಿಲ್ಲ. ಕೋಮು ಸಂಬಂಧಿ ಘಟನೆಗಳ ಬಗ್ಗೆ ಇಲಾಖೆಗೆ ಮಾಹಿತಿ ನೀಡಿ. ಅಕ್ರಮ‌ ಚಟುವಟಿಕೆಗಳ ಮಾಹಿತಿ ಇದ್ದರೆ ಯಾವುದೇ ಸಮಯದಲ್ಲೂ ಕರೆ ಮಾಡಿ ತಿಳಿಸಿ. ನನ್ನ‌ ನಂಬರ್ 24 ಗಂಟೆಯೂ ಚಾಲ್ತಿಯಲ್ಲಿರುತ್ತದೆ ಎಂದು‌ ಉಡುಪಿ ಜಿಲ್ಲಾ ನೂತನ ಎಸ್ಪಿ ಹರಿರಾಂ ಶಂಕರ್ ಹೇಳಿದರು.

ರೌಡಿಸಂ, ಗೂಂಡಾಯಿಸಂನಿಂದ ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ಕ್ರಮವಹಿಸಲಾಗುತ್ತದೆ. ಕಮ್ಯೂನಲ್  ಸಮಸ್ಯೆ ತಡೆಗೆ ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ. ಹಿಂದಿನ ಎಸ್ಪಿಯವರಾದ ಡಾ. ಅರುಣ್ ಕೆ. ಅವರು ಉಡುಪಿ ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಬಲಪಡಿಸಿದ್ದರು. ಅದನ್ನು ಹಾಗೆಯೇ ಮುಂದುವರೆಸಲಾಗುವುದು.‌ ಅವರು ಪ್ರಾಮಾಣಿಕರಾಗಿ, ನಿಷ್ಠಾವಂತರಾಗಿ ಕೆಲಸ ಮಾಡಿದ್ದು ನನಗೆ ಮಾದರಿಯಾಗಿದೆ.

ಈ ಹಿಂದೆ ಜಿಲ್ಲೆಯ ಕುಂದಾಪುರ ಉಪವಿಭಾಗದ ಎಎಸ್ಪಿ ಆಗಿದ್ದರಿಂದ ಉಡುಪಿ ಜಿಲ್ಲೆ ಮೊದಲೆ ಪರಿಚಿತವಾಗಿದ್ದು ಯಾವುದೇ ಅಕ್ರಮ ಚಡುವಟಿಕೆಗಳಿಗೆ ಇಲ್ಲಿ ಆಸ್ಪದವಿಲ್ಲ ಎಂದು ಖಡಕ್ ಸಂದೇಶ ರವಾನಿಸಿದರು.

Comments are closed.