ಕರಾವಳಿ

ನಿರಂತರ ಮಳೆಯಿಂದಾಗಿ ಕುಂದಾಪುರ, ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮಸ್ಯೆ; ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ

Pinterest LinkedIn Tumblr

ಕುಂದಾಪುರ: ನಿರಂತರವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆ ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಾಗೂ ಸರ್ವೀಸ್ ರಸ್ತೆಯಲ್ಲಾಗುತ್ತಿರುವ ಸಮಸ್ಯೆ ಬಗ್ಗೆ ಸ್ಥಳೀಯರು, ಸವಾರರ ದೂರಿನ ಹಿನ್ನೆಲೆ ಪರಿಸ್ಥಿತಿ ಅವಲೋಕಿಸಲು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೋಮವಾರ ವಿವಿದೆಡೆ ತೆರಳಿದರು‌.

ಕಳೆದ ಹಲವು ವರ್ಷಗಳಿಂದ ಇದೇ ಸಮಸ್ಯೆಯನ್ನ ಎದುರಿಸುತ್ತಿರುವ ಸ್ಥಳೀಯರ ಅಹವಾಲಿಗೆ ಸ್ಪಂದಿಸಿದ ಅವರಯ ವಾಹನ ಸವಾರರ ಸಮಸ್ಯೆ ಆಲಿಸಿದ್ದು ತಕ್ಷಣ ಈ ಸಮಸ್ಯೆಗೆ ತುರ್ತು ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಂಸದರ ಜೊತೆ ಸ್ಥಳಕ್ಕೆ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ, ಮುಖಂಡರಾದ ರಾಜೇಶ ಕಾವೇರಿ,‌ ಸುಧೀರ್ ಕೆ.ಎಸ್‌., ಶಂಕರ ಅಂಕದಕಟ್ಟೆ, ಸುರೇಶ್ ಶೆಟ್ಟಿ ಕಾಡೂರು, ಪುರಸಭೆ ಸದಸ್ಯ ಸಂತೋಷ್ ಶೆಟ್ಟಿ ಮೊದಲಾದವರಿದ್ದರು.

ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಟದಿಂದ ಸಂಗಮ್ ತನಕ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಕುರಿತು ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಹಾಗೂ ನವಯುಗ ಹಾಗೂ ಐ.ಆರ್.ಬಿ ಸಂಬಂದಪಟ್ಟವರನ್ನು ಕರೆದು ಬಸ್ರೂರು ಮೂರುಕೈ, ಕೋಟೇಶ್ವರ ಟ್ರಾಪಿಕ್‌ಸಮಸ್ಯೆ, ದಾರಿದೀಪ ನಿರ್ವಹಣೆ, ಸರ್ವೀಸ್ ರಸ್ತೆಯಲ್ಲಿನ ಸಮಸ್ಯೆ, ಅಂಡರ್ ಪಾಸ್ ಸರ್ವೀಸ್ ರಸ್ತೆ ವಿಸ್ತಾರ ಮಾಡಿ ವಾಹನ ಸಂಚಾರ ಸುಗಮಗೊಳಿಸಬೇಕು. ಪ್ರಮುಖವಾಗಿ ಚರಂಡಿ ಸಮಸ್ಯೆ ಬರಿಹರಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಕೊಡಬೇಕು. ಒಂದೆರಡು ಕಡೆ ಮೇಲ್ಸೇತುವೆಯಿಂದ ನೀರು ಕೆಳಗೆ ಬಿದ್ದು ಪಾದಾಚಾರಿಗಳು, ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು ಕಂಡುಬಂದಿದ್ದು ಇದೆಲ್ಲಾ ಸಮಸ್ಯೆ ಶೀಘ್ರ ಸರಿಪಡಿಸಲು ಸೂಚಿಸಲಾಗಿದೆ. ಮುಂದಿನ ವಾರ ಮತ್ತೆ ಅಧಿಕಾರಿಗಳ ಸಭೆ ಕರೆದು ಪ್ರಗತಿ ಪರಿಶೀಲನೆ ಮಾಡಲಾಗುತ್ತದೆ.
– ಕೋಟ ಶ್ರೀನಿವಾಸ ಪೂಜಾರಿ(ಉಡುಪಿ-ಚಿಕ್ಕಮಗಳೂರು ಸಂಸದ)

 

Comments are closed.