ಕರಾವಳಿ

ಕುರ್ಲಾ-ಕೋಚ್ಚುವೇಲಿ ರೈಲು ಕುಂದಾಪುರದಲ್ಲಿ ನಿಲುಗಡೆ; ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಕುಂದಾಪುರ ರೈಲ್ವೇ ಸಮಿತಿ ಧನ್ಯವಾದ

Pinterest LinkedIn Tumblr

ಕುಂದಾಪುರ: ಮುಂಬಯಿಗೆ ಬೇಡಿಕೆಗೆ ಅನುಗುಣವಾಗಿ ರೈಲು ಸೌಲಭ್ಯಗಳಿಲ್ಲದ ಕಾರಣ ಮುಂಬಯಿಗೆ ಹೆಚ್ಚುವರಿ ರೈಲುಗಳಿಗೆ ನಿಲುಗಡೆ ಕೋರಿ ಸಮಿತಿ ಹಲವು ವರ್ಷಗಳಿಂದ ಸಲ್ಲಿಸುತಿದ್ದ ಬೇಡಿಕೆಗೆ ಉಡುಪಿ ಚಿಕ್ಕಮಗಳೂರು ಸಂಸದರಾದ ಶೋಭಾ ಕರಂದ್ಲಾಜೆಯವರು ಸ್ಪಂದಿಸಿದ್ದು, ರೈಲು ಸಚಿವರನ್ನು ಭೇಟಿಯಾಗಿ ಕುಂದಾಪುರ ನಿಲ್ದಾಣದಲ್ಲಿ ಕುರ್ಲಾ ಲೋಕಮಾನ್ಯ ತಿಲಕ್- ಕೋಚುವೇಲಿ ವಾರಕ್ಕೆರಡು ದಿನದ ರೈಲಿಗೆ ನಿಲುಗಡೆಗೆ ಸಚಿವ ಅಶ್ವಿನ್ ವೈಷ್ಣವ್ ಆದೇಶ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಜನತೆಯ ಬಹುಕಾಲದ ಬೇಡಿಕೆ ಈಡೇರಿಸಿದ ಸಂಸದರಿಗೆ ಕುಂದಾಪುರ ರೈಲು ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಜನತೆಯ ಪರವಾಗಿ ಧನ್ಯವಾದ ತಿಳಿಸಿದ್ದಾರೆ.

ಮುಂದಿನ ವಾರದಿಂದ ಈ ರೈಲು ನಿಲುಗಡೆ ಆರಂಭಿಸಲಿದ್ದು, ಈ ರೈಲು ಶಬರೀಮಲೆ ಯಾತ್ರಿಗಳಿಗೆ ಹಾಗು ಕೆರಳ ಬಾಗದಿಂದ ಕೊಲ್ಲೂರು ಮೂಕಾಂಬಿಕ ದೇವಾಲಯಕ್ಕೆ ಬರುವ ಯಾತ್ರಿಗಳಿಗೂ ಅನುಕೂಲ ಮಾಡಿಕೊಡಲಿದೆ.

ಮುಂಬಯಿಯಲ್ಲಿ ನೆಲೆಸಿದ ಅಸಂಖ್ಯಾತ ಜನ ಕುಂದಾಪುರ ಕರಾವಳಿಯ ಜನ ನಿರಂತರವಾಗಿ ಹೆಚ್ವುವರಿ ರೈಲುಗಳಿಗೆ ಬೇಡಿಕೆ ಇಡುತಿದ್ದು, ಕುಂದಾಪುರದ ಜನಪ್ರೀಯ ಶಾಸಕ ಎ. ಕಿರಣ ಕುಮಾರ್ ಕೊಡ್ಗಿ ಹಾಗು ಭಾರತೀಯ ಜನತಾ ಪಕ್ಷದ ಯುವ ಮುಖಂಡ ಅವಿನಾಶ್ ಉಳ್ತೂರು ಈ ಬೇಡಿಕೆಯನ್ನು ಪರಿಗಣಿಸಿ ಸಂಸದರ ಮೂಲಕ ಸಚಿವಾಲಯದ ಗಮನ ಸೆಳೆದು ನಿಲುಗಡೆ ಪಡೆಯುವಲ್ಲಿ ಯಶಸ್ವಿಯಾಗಿದ್ದು ಅವರಿಗೂ ಕುಂದಾಪುರ ರೈಲು ಸಮಿತಿ ದನ್ಯವಾದ ತಿಳಿಸಿದೆ. ಜಿಲ್ಲೆಯ ಅತ್ಯದಿಕ ಆಧಾಯ ತರುವ ನಿಲ್ದಾಣಗಳಲ್ಲಿ ಒಂದಾದ ಕುಂದಾಪುರಕ್ಕೆ ಇನ್ನೂ ಹೆಚ್ವು ರೈಲು‌ ಸೌಲಭ್ಯಗಳು ಸಿಗಬೇಕು ಎಂಬುದು ಸಮಿತಿಯ ಬೇಡಿಕೆಯಾಗಿದೆ‌.

Comments are closed.